June 07: ದಿನಾಂಕ: 29.05.2018ರಂದು ನಮ್ಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಮುಗಿಸಿಕೊಂಡು ಮತ್ತೆ ಅತ್ಯಂತ ಸಂತಸ ಸಡಗರದಿಂದ ಮರಳಿ ಶಾಲೆಗೆ ಬರುವ ದಿನ.

ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅತ್ಯಂತ ಸಡಗರದಿಂದ ಶಾಲಾ ತರಗತಿ ಕೋಣೆಗಳನ್ನು ಅಲಂಕರಿಸಿದ್ದರು. ಅವರಿಗೆ ಸಂತೋಷವನ್ನುಂಟು ಮಾಡಲು ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಮಕ್ಕಳು ಬೇಸಿಗೆ ರಜೆಯನ್ನು ಕಳೆದು ಸಂತೋಷದಿಂದ ಶಾಲೆಗೆ ಆಗಮಿಸಿದ್ದರು. ಶಾಲಾ ಅಲಂಕಾರವನ್ನು ನೋಡಿ ಮತ್ತು ಹೊಸ ತರಗತಿಗಳಿಗೆ ಹೋಗುತ್ತೇವೆ ಎಂಬ ಹುಮ್ಮಸ್ಸಿನಿಂದ ಬಂದಿದ್ದರು. ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ನೀಡಿ ಹೊಸ ಶಾಲಾ ವರ್ಷಕ್ಕೆ ಸ್ವಾಗತಿಸಿದರು.

Sr Kavitha BS, Headmistress
Bethany HS, Chittapur

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]