July 14:  07/07/2018 ರಂದು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ 8ನೇ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ಪಾಲಕ ಮತ್ತು ಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು.


ಬೆಥನಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಿ.ಕವಿತಾ ರವರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರಮುಖ ಮೌಲ್ಯಗಳನ್ನು ಕುರಿತು ಪಾಲಕರೊಡನೆ ಚರ್ಚಿಸಿದರು.


ಅದೇ ರೀತಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಪಾಲಕರ ಮತ್ತು ಶಿಕ್ಷಕರ ಜವಾಬ್ದಾರಿಗಳ ಬಗ್ಗೆ ಬೆಥನಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ದೇವಪ್ಪ ಸರ್ ಹಿಂದಿ ಭಾಷಾ ಶಿಕ್ಷಕರು ಹಾಗೂ ಶ್ರೀಯುತ ಭೀಮರೆಡ್ಡಿ ಗಣಿತ ಶಿಕ್ಷಕರು ವಿವರವಾಗಿ ಕೆಲವು ಮುಖ್ಯ ಕರ್ತವ್ಯಗಳಾದ ಶಿಸ್ತು, ಸಂಸ್ಕಾರ, ಮಕ್ಕಳ ಜವಾಬ್ದಾರಿ ಇತ್ಯಾದಿ ವಿಷಯಗಳನ್ನು ಒಂದೊಂದಾಗಿ ಪಾಲಕರನ್ನು ಕುರಿತು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಜರಿದ್ದು, ಸಭೆಯನ್ನು ಯಶಸ್ವಿಗೊಳಿಸಿದರು.

 

 


ಶ್ರೀಯುತ ದೇವಪ್ಪ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]