Aug 30: ವಾಮಂಜೂರು-ಸೈಂಟ್ ರೇಮಂಡ್ಸ್ ಸಮೂಹ ವಿದ್ಯಾ ಸಂಸ್ಥೆಗಳಾದ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು, ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳ ಹಳೆ ವಿದ್ಯಾರ್ಥಿ ಸಮಾಗಮ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಸಂಚಾಲಕರಾದ ಭಗಿನಿ ಮಾರಿಯೋಲಾ, ಹಳೆವಿದ್ಯಾರ್ಥಿಗಳು ಕಲಿತ ವಿದ್ಯಾಸಂಸ್ಥೆಯೊಂದಿಗೆ ಆತ್ಮೀಯ ಬಾಂಧವ್ಯವನ್ನು ಇಟ್ಟುಕೊಂಡು ಸಂಸ್ಥೆಯ ಕಾರ್ಯಚಟುವಟಿಕೆಯಲ್ಲಿ ಸಹಕರಿಸಬೇಕೆಂದು ಕರೆಯಿತ್ತರು. 2018ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಉಪಾಧ್ಯಕ್ಷರಾಗಿ ರೋಬಿನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಮೆಲಿಟಾರವರು ಸರ್ವಾನುಮತದಿಂದ ಆಯ್ಕೆಯಾದರು.


ತದನಂತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ನಡೆಯಿತು. ಹಿರಿಯ ಉಪನ್ಯಾಸಕಿ ಶ್ರೀಮತಿ ಹರಿಣಾಕ್ಷಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸಾಧನಾ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ರೋಶ್ನಿ, ಪದವಿ ಕಾಲೇಜು ಪ್ರಾಚರ್ಯರಾದ ಭಗಿನಿ ಸಗಾಯ ಸೆಲ್ವಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಅನಿತಾ ಫೆರಾವೋ ಅತಿಥಿ ಗಣ್ಯರನ್ನು ಸ್ವಾಗತಿಸಿದರು, ಶ್ರೀಮತಿ ಗೀತಾ ವಂದಿಸಿದರು ಹಾಗೂ ಶ್ರೀ ಅವಿಲ್ ರೆನಿಲ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.

 

Sr Sadhana BS, Principal
St raymond’s PU College, Vamanjoor

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]