Nov 10 : ದಿನಾಂಕ 09.11.2022ರಂದು ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ಬೆಥನಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವವನ್ನು ಆಚರಿಸಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕಿಯಾದ ಭಗಿನಿ ಸಿಂಥಿಯಾ ಸಿಕ್ವೇರಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಭಗಿನಿ ಕವಿತಾ ಮತ್ತು ಭಗಿನಿ ಅವೆಲಿನ್‍ರವರು ಹಾಗೂ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಶಿವಕಾಂತರವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಶ್ರೀಮತಿ ರಾಜೇಶ್ವರಿಯವರು ಸರ್ವ ಅತಿಥಿಗಳಿಗೂ. ಶಿಕ್ಷಕರಿಗೂ, ಮುದ್ದು ಮಕ್ಕಳಿಗೂ ಸ್ವಾಗತವನ್ನು ಕೋರಿದರು.

ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ಸರ್ವ ಅತಿಥಿ ಗಣ್ಯರು, ಭಗಿನಿಯರು ಮತ್ತು ಶಿಕ್ಷಕರು ಫಾದರ್ ರೇಮಂಡ ಮಸ್ಕರೇನಸ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುತ್ತಾ ಬೆಥನಿ ಭಗಿನಿಯರು ಸಂಸ್ಥೆಯ ಲಾಂಛನ ಚಿತ್ರ (ಲೋಗೊ)ವನ್ನು ಅನಾವರಣಗೊಳಿಸಿದರು. ಮಕ್ಕಳಿಂದ ಸಂಸ್ಥೆಯ ಕೇಂದ್ರೀಯ ಮೌಲ್ಯಗಳನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿಇಂಗ್ಲೀಷನಲ್ಲಿ ಪಠಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಭಗಿನಿ ಸಿಂಥಿಯಾ ಸಿಕ್ವೇರಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಮೃತ ಮಹೋತ್ಸವ ಆಚರಣೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮಕ್ಕಳಿಗೆ ಕೇಂದ್ರೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೆಪಿಸಿದರು. ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶದಿಂದ 1948 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು 33 ಹಾಸ್ಟೇಲ್‍ಗಳು, 76,000 ವಿದ್ಯಾರ್ಥಿಗಳು, 3,500 ಸಿಬ್ಬಂದಿಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಈ ಸಂಸ್ಥೆಯ ಸಾಧನೆಯ ಕೀರ್ತಿ ಫಾದರ್ ರೇಮಂಡ್ ಮಸ್ಕರೇನಸ್‍ರವರಿಗೆ ಸಲ್ಲುತ್ತದೆ. ಫಾದರ್ ರೇಮಂಡರವರು ಕಂಡ ಶಿಕ್ಷಣದ ಕನಸನ್ನು ಪ್ರಾರಂಭದ ಹಂತದಲ್ಲಿನ 4 ಜನ ಭಗಿನಿಯರು ಮತ್ತು ಇಂದಿನ ಭಗಿನಿಯರಿಂದ ಸತತ ಪರಿಶ್ರಮದಿಂದ ಈ ಸಂಸ್ಥೆ ಬೆಳೆದು ನಿಂತಿದೆ. ಈ ಸಂಸ್ಥೆಯಿಂದ ಹೊಮ್ಮಿದ ಜ್ಞಾನದ ಬೆಳಕು ಎಲ್ಲೆಡೆ ಪಸರಿಸಲಿ ಎಂದು ಹೇಳುತ್ತಾ ತಮ್ಮ ಅಧ್ಯಕ್ಷೀಯ ಭಾಷಣಕ್ಕೆ ಪೂರ್ಣ ವಿರಾಮವನ್ನಿತ್ತರು. ಕಾರ್ಯಕ್ರಮವನ್ನು ವಂದನಾರ್ಪಣೆಗಳೊಂದಿಗೆ ಸಂಪೂರ್ಣಗೊಳಿಸಲಾಯಿತು.

 

 

 

 

 

 

 

 

ಭಗಿನಿ ಕವಿತಾ, ಮುಖ್ಯೋಪಾಧ್ಯಾಯರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]