ಆಹಾ.. ಏನಿದು ಆರ್ಭಟ, ವರುಣನ ರೌದ್ರಾವತಾರ
ಇದರಡಿ ಸಿಲುಕಿ ನರಳಿದರು ಜನ ಸಾವಿರ ಸಾವಿರ |
ತಂಪಾಗಿ ನಡುಗಿತು ಇಳೆ, ನಾಶವಾಯ್ತು ರೈತರ ಬೆಳೆ
ಕಷ್ಟ ಸಂಕಷ್ಟಗಳೇ ತಂದಿತು ಈ ವರ್ಷದ ಮಳೆ ||

ಏನು ಹೇಳಲಿ ನಿನ್ನಯ ಹನಿಗಳ ಶಕ್ತಿ
ಛೆ! ನಷ್ಟವಾಯ್ತು ಜನರ ಆಸ್ತಿ ಪಾಸ್ತಿ |
ಈ ವರುಣನ ಪ್ರವಾಹದ ಗೋಳು
ಛೆ! ಅಂತ್ಯವಾಯ್ತು ಹಲವು ಜನರ ಬಾಳು ||

ಮರಗಿಡಗಳ ಕಡಿದು ಬರಿದಾಯ್ತು ಕಾಡು
ಮಳೆಯ ಆರ್ಭಟದಿಂದ ನಾಶವಾಯ್ತು ಜನರ ಬೀಡು |
ಪ್ರಕೃತಿ ಮಾತೆ ಮುನಿದರೆ ಭಲೇ! ಸರ್ವನಾಶ
ಪ್ರಕೃತಿ ಮಾತೆಯ ಪೂಜಿಸಿದರೆ ಸ್ವರ್ಗ ಸುಖ ಸಂತೋಷ ||

ಮರಗಿಡಗಳನ್ನು ಪೋಷಿಸಿ ಕಾಡು ಬೆಳೆಸೋಣ
ಪ್ರಕೃತಿ ಮಾತೆಯನು ರಕ್ಷಿಸಿ ನಮ್ಮನ್ನು ಉಳಿಸೋಣ ||

ಪ್ರಣಾಮ್ ಎ, 8 ಎ
ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆ,  ಕುಲಶೇಖರ

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]