ಆಹಾ.....!
ಬಿಸಿ ಬಿಸಿ ಚಹಾ...
ಕೊತ ಕೊತ
ಕುದಿವ ನೀರಿಗೆ
ಚಹಾ ಪುಡಿಯನ್ನು
ಅಪ್ಪಿ ಹಿಪ್ಪೆ ಮಾಡಿ
ರಂಗು ಮಾಡುವ ತವಕ !
ಎಲ್ಲೋ ಡಬ್ಬಿಯಲ್ಲಿದ್ದ
ಚಹಾ ಪುಡಿಗೆ
ನೀರಿನ ಸಲುಗೆ !
ಒಂದಾದ ಮೇಲೆ
ಬಿಡಿ ಬಿಡಿ ಮಡಿ
ರೆಡಿಯಾದ ಚಹಾಕ್ಕೆ
ಹಾಲು ಸಕ್ಕರೆಯ ನೆಂಟಸ್ಥಿಕೆ
ಬಿಸಿ ಬಿಸಿ ಚಹಾ
ಗಂಟಲಿಗಿಳಿದಂತೆ
ನೀರು ಚಹಾ ಪುಡಿ
ಹಾಲು ಸಕ್ಕರೆ ಸಾಮರಸ್ಯಕ್ಕೆ
ಒಂದು ನಮಸ್ಕಾರ !

Violet Pinto, Lecturer
St Mary’s PU College, Arsikere

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]