03.01.2019: ಬೆಥನಿ ಎಜ್ಯುಕೇಶನಲ್ ಸೊಸೈಟಿಯ ಬೆಳಗಾವಿ ತಾಲೂಕಿನ ಸಂತಿಬಸ್ತವಾಡದಲ್ಲಿನ ಸಂತ ಜೋಸೆಫರ ಆರ್ಫನೇಜ್ ಪ್ರೌಢ ಶಾಲೆಯಲ್ಲಿ ಶಾಲಾ ಗ್ರಂಥಪಾಲಕ ಹಾಗೂ ಕಛರಿ ಗುಮಾಸ್ತರಾಗಿ 36 ವರ್ಷಗಳ ತಮ್ಮ ವಿನಮ್ರ ಸೇವೆಯ ನಂತರ ನಿವೃತ್ತಿ ಹೊಂದಿರುವ ಶ್ರೀ. ಡಿ.ಎನ್. ಮುಲ್ಲಾ ಸರ್‍ರವರ ವಿದಾಯ ಕಾರ್ಯಕ್ರಮ ದಿನಾಂಕ 03.01.2019 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ಪಶ್ಚಿಮ ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಭ|| ಅಸುಂಪ್ತಾ ವಹಿಸಿದ್ದರು. ವಂ. ಸ್ವಾಮಿ ಅಲೆಕ್ಸ್ ಡಿಕ್ರೂಜ್ ಆಶೀರ್ವಚನ ನೀಡಿದರು ಭ|| ಪಿಯರಿನ್ ಮುಖ್ಯ ಅತಿಥಿಗಳಾಗಿ ಮುಲ್ಲಾಸರ್‍ರವರ ಸೇವೆಯನ್ನು ಸ್ಮರಿಸಿದರು

ತಮ್ಮ ಪ್ರತಿಭಾ ಕೌಶಲ್ಯದಿಂದ ಶಾಲಾ ಬ್ಯಾಂಡ ಕಟ್ಟಿ ಶಾಲೆಯ ಹಾಗೂ ಸಂಸ್ಥೆಯ ಎಲ್ಲ ಕಾರ್ಯಗಳನ್ನು ಶೃದ್ದೆಯಿಂದ ನಿರ್ವಹಿಸಿದ ಸರ್. ಮುಲ್ಲಾರವರನ್ನು ಸನ್ಮಾನಿಸಿ ಗೌರವಿಸಲಾಯಿತು ಶಾಲಾ ಸಂಚಾಲಕಿ ಭ|| ತೆರೆಜಿಯಮ್ಮ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಭ|| ಲವಿನಾರವರ ಸಾರಥ್ಯದಲ್ಲಿ ಶಾಲೆಯ ಸರ್ವ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಗೂ ಅಹ್ವಾನಿತ ಸಭಿಕರ ಸಮ್ಮುಖದಲ್ಲಿ ಶ್ರೀ. ಡಿ. ಎನ್ ಮುಲ್ಲಾಸರ್‍ರವರಿಗೆ ಅರ್ಥಪೂರ್ಣ ಹಾಗೂ ಭಾವಪೂರ್ಣ ಬೀಳ್ಕೋಡುಗೆ ನೀಡಿ ಸತ್ಕರಿಸಲಾಯಿತು

 

 

 

 

 

 

 

ಶ್ರೀ. ದಯಾನಂದ ಆರ್ ಹೆಚ್, ಕನ್ನಡ ಶಿಕ್ಷಕರು    
ಎಸ್.ಜೆ.ಓ.ಎಚ್ ಎಸ್ ಸಂತಿಬಸ್ತವಾಡ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]