Feb13: ಸಿಸ್ಟರ್ ಶರಲ್ ಬಿಎಸ್: ಸಿ. ಬಿ.ಇ ಮತ್ತು ಬೆಥನಿ ವಿದ್ಯಾ ಸಂಸ್ಥೆಗಳಲ್ಲಿ 39 ವರ್ಷಗಳ ಸುಧೀರ್ಘ ವಿದ್ಯಾದಾನಗೈದು ಪ್ರಸ್ತುತ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಜ್ಪೆ ಇಲ್ಲಿಂದ  2019ನೇ ಇಸವಿ ಜನವರಿ 29 ರಂದು ನಿವೃತ್ತರಾದ ಸಿಸ್ಟರ್ ಶರಲ್‍ರವರಿಗೆ ನಮ್ಮ ನಮನಗಳು.
ಕಾಯಕವೇ ಕೈಲಾಸ ಎಂಬಂತೆ ತಮ್ಮ ಕೆಲಸದಲ್ಲಿನ ಏಕ್ರಾಗ್ರತೆ, ನಯನಾಜೂಕುತನ, ಸಮಯ ಪ್ರಜ್ಞೆ, ಆಡಳಿತ ಕೌಶಲ್ಯಗಳು, ನಾಯಕತ್ವದ ಗುಣಗಳು, ವಾಕ್ಚಾತುರ್ಯ, ಸಹಕಾರ, ಮಾನವೀಯತೆ ಮುಂತಾದ ಅಮೂಲ್ಯ ಗುಣರತ್ನಗಳು ಅವರ ವ್ಯಕ್ತಿತ್ವದ ಎಳೆಗಳು ಎಂದು ಹೇಳಲು ಹೆಮ್ಮೆ ಪಡುತ್ತೇವೆ. ಸಹೋದ್ಯೋಗಿ ಬಂಧುಗಳೊಡನೆ ಆತ್ಮೀಯತೆ, ಎಳೆಯರಲ್ಲಿ ಅವರು ತೋರಿದ ಒಲವು, ಕಿರಿಯರಿಗೆ ಅವರು ನೀಡಿದ ಮಾರ್ಗದರ್ಶನ, ಜೀವನದಲ್ಲಿ ಬಂದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡುವ ಒಲವಿನ ಮಾತೆ ಎಂದು ಹೇಳಲು ಅಭಿಮಾನ ಪಡುತ್ತೇವೆ.  ಅವರ ನಿಸ್ವಾರ್ಥ ಸೇವೆ ಅಭೂತಪೂರ್ವವಾದುದು. ಸಹಸ್ರಾರು ವಿದ್ಯಾರ್ಥಿಗಳ ಜೀವನದಲ್ಲಿ ದಾರಿದೀಪವಾಗಿ ಬಂದ ಅವರನ್ನು ದೇವರು ಆಶೀರ್ವದಿಸಲಿ ಅವರ ಮುಂದಿನ ಜೀವನವು ಸುಖ ಶಾಂತಿ ನೆಮ್ಮದಿ ಸಂತೃಪ್ತಿಗಳಿಂದ ಕೂಡಿರಲಿ ಎಂದು ಹಾರೈಸುತ್ತೇವೆ.
ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಡಾಕ್ಟರ್ ಸಿಸ್ಟರ್ ಮಾರಿಯೋಲಾ ಬಿ.ಎಸ್. ಸ್ಥಳೀಯ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಲೊಲಿಟಾ ಬಿ.ಎಸ್, ಶಾಲಾ ಸಂಚಾಲಕಿ ಸಿಸ್ಟರ್ ಮಾರಿಲೀಟಾ ಬಿ.ಎಸ್, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಅನಿತಾ ಡಿಸೋಜರವರು ಮತ್ತು ಪ್ರಭಾರ ಮುಖ್ಯ ಶಿಕ್ಷಕಿ ಸಿಸ್ಟರ್ ವೆನಿಶಾ ಬಿ.ಎಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  

 

 

ಸಿಸ್ಟರ್ ವೆನಿಶಾ ಬಿ.ಎಸ್
ಪ್ರಭಾರ ಮುಖ್ಯ ಶಿಕ್ಷಕಿ
ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲೆ ಬಜ್ಪೆ