ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲೆ, ಕಿನ್ನಿಗೋಳಿಯಲ್ಲಿ ಸತತ 41 ವರ್ಷ 5 ತಿಂಗಳುಗಳ ಸುದೀರ್ಘ ಸೇವೆಯನ್ನು ಸಲ್ಲಿಸುತ್ತಿದ್ದ ಶ್ರೀಮತಿ ಪದ್ಮಾವತಿ ಟೀಚರ್‍ರವರಿಗೆ ವಿದಾಯ ಕೂಟ ಸಮಾರಂಭ ಜರುಗಿಸಲಾಗಿತ್ತು.

ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನವನ್ನು ಬೆಥನಿ ವಿದ್ಯಾಸಂಸ್ಥೆಯ ಶಿಕ್ಷಣ ಸಂಯೋಜಕರಾದ ಡಾ. ಸಿಸ್ಟರ್ ಮಾರಿಯೋಲ ಬಿ.ಎಸ್ ರವರು ವಹಿಸಿದರು. ಶಾಲಾ ಸಂಚಾಲಕಿ ಸಿಸ್ಟರ್ ಡಿವಿನಾ, ತಾಳಿಪಾಡಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಭಯ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರುಗಳು ಹಾಜರಿದ್ದರು. ವಿದಾಯ ಕೂಟವು ಹಿ.ಪ್ರಾ. ಶಾಲೆ ಹಾಗೂ ಫ್ರೌಢ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿತು.

ಶಾಲೆಯ ಸಹ ಶಿಕ್ಷಕಿಯಾದ ಸುಪ್ರೀತ, 7ನೇ ತರಗತಿಯ ವಿದ್ಯಾರ್ಥಿ ಕುಮಾರಿ ಸಾಕ್ಷಿ ಹಾಗೂ ಫ್ರೌಢ ಶಾಲಾ ದೈಹಿಕ ಶಿಕ್ಷಕರಾದ ಹಿಲರಿ ಸರ್ ರವರು ಪದ್ಮಾವತಿ ಟೀಚರ್‍ರವರ ಒಡನಾಟದಲ್ಲಿ ಕಳೆದ ಕೆಲವೊಂದು ದಿನಗಳನ್ನು ನೆನಪಿಸಿದರು. ಶಾಲಾ ಸಂಚಾಲಕಿ ಸಿಸ್ಟರ್. ಡಿವಿನಾ ರವರು ಬೆಥನಿ ಸಂಸ್ಥೆಯ ವತಿಯಿಂದ ಶುಭಹಾರೈಕೆಯನ್ನು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿಯವರು ಸನ್ಮಾನ ಪತ್ರವನ್ನು ವಾಚಿಸಿದರು. ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಶ್ರೀಮತಿ ಪದ್ಮಾವತಿಯವರನ್ನು ಶಾಲು ಹೊದಿಸಿ ಫಲ ಪುಷ್ಪ ಹಾರದೊಂದಿಗೆ ಗೌರವಯುತವಾಗಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳು, ಕುಟುಂಬಸ್ಥರು, ಶಿಕ್ಷಕ ಬಂಧುಗಳು ತಮ್ಮ ಶುಭ ಹಾರೈಕೆಯನ್ನು ಸಲ್ಲಿಸಿದರು.  ಕ್ರಮವನ್ನು ಶ್ರೀಮತಿ ಸೋನಾಲಿ ಇವರು ನಿರೂಪಿಸಿದರು.

ಸಿಸ್ಟರ್ ಹಿಲ್ಡಾ ರೊಡ್ರಿಗಸ್, ಮುಖ್ಯ ಶಿಕ್ಷಕಿ
ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲೆ, ಕಿನ್ನಿಗೋಳಿ