ಗದಗಿನ ಪ್ರತಿಷ್ಠೀತ ಲೊಯೊಲಾ ಪ್ರೌಢ ಶಾಲೆಯಲ್ಲಿ ಪೂಜ್ಯನೀಯ ಸಿಸ್ಟರ್ ನೀನಾ, ಮುಖ್ಯೋಪಾಧ್ಯಾಯಿನಿಯರು ಮತ್ತು ಪೂಜ್ಯನೀಯ ಸಿಸ್ಟರ್ ಫ್ರೀಡಾ, ಕ್ಲರ್ಕ್ ಇವರೀರ್ವರು ಸತತ 35 ವರ್ಷ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂದರ್ಭದಲ್ಲಿ ದಿನಾಂಕ 27.02.2020ರಂದು ಆಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪಶ್ಚಿಮ ವಲಯದ (ಧಾರವಾಡ) ಪ್ರಾಂತಾಧಿಕಾರಿಗಳಾದ ಪೂಜ್ಯನೀಯ ಸಿಸ್ಟರ್ ಅಸುಂತಾರವರು, ಉಪಪ್ರಾಂತಾಧಿಕಾರಿಗಳಾದ ಸಿಸ್ಟರ್ ರೋಜ್ ಆನ್, ಸಲಹಾ ಸಮಿತಿಯ ಸದಸ್ಯರಾದ  ಸಿಸ್ಟರ್ ವೆರೋನಿಟಾ, ಶಾಲಾ ಸಂಚಾಲಕಿಯರಾದ ಸಿಸ್ಟರ್ ದಿವ್ಯಾ, ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ವೀಣಾ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್.ಎಸ್. ಕೆಳದಿಮಠ ರವರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಹಾಜರಾಗಿದ್ದು ಭಗಿನಿಯರನ್ನು ಅಭಿನಂದಿಸಿ ಸನ್ಮಾನಿಸಿದರು. ಇವರು ಸಿಸ್ಟರ್‍ರವರ ಸೇವೆಯಲ್ಲಿ ಕರ್ತವ್ಯ ಪ್ರಜ್ಞೆ, ಆಡಳಿತ ಕೌಶಲ್ಯ ಗುಣಮಟ್ಟದ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಪ್ರಶಂಸಿದರು. ಮಕ್ಕಳ ಪಾಲಿಗೆ ಮಾತೃ ಸ್ವರೂಪರಾಗಿ ತೋರಿದ ಪ್ರೀತಿ, ಸಹನೆ, ಸರಳತೆ, ಶಾಂತ ಸ್ವಭಾವ ಕ್ಷಮಾಗುಣದಂತಹ ಉದಾತ್ತ ಗುಣಗಳನ್ನು ಹೊಂದಿರುವ ಮುಖ್ಯೋಪಾಧ್ಯಾಯಿನಿ ಸಿಸ್ಟರ ನೀನಾರವರಿಗೆ ಹಾಗೂ ಸಿಸ್ಟರ್ ಫ್ರೀಡಾರವರಿಗೆ, ಗದಗ ಲೊಯೊಲಾ ಆಡಳಿತ ಮಂಡಳಿ, ಶಿಕ್ಷಕ/ಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆಗಳನ್ನು ಅರ್ಪಿಸಿದರು.

  

 

ಚಂದ್ರಪ್ಪ ಕುರಿ, ಸಹ ಶಿಕ್ಷಕ
ಲೊಯೊಲಾ ಪ್ರೌಢ ಶಾಲೆ, ಗದಗ

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]