Print


ವಂ. ಭಗಿನಿ ¥sÉǯÉmïರವರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಉತ್ತರ ವಲಯದ ಸಂತ ಪೌಲರ ಪ್ರಾಢಶಾಲೆ, ಬಳಕುಂಜೆಯಲ್ಲಿ ತಮ್ಮ ಸಾರ್ಥಕ 25 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಪೂರ್ಣಗೊಳಿಸಿ ಮಾರ್ಚ್ 31, 2020 ರಂದು ಸೇವಾ ನಿವೃತ್ತಿಯನ್ನು ಹೊಂದಿದರು. ಕೊರೆನಾ ಕಂಟಕದ ನಡುವೆ ಅವರ ಸಾರ್ವಜನಿಕ ವಿದಾಯ ಸಮ್ಮಾನ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ.

ತಾಗ್ಯಮಯ, ಸೆವಾ ಮನೋಭಾವದ ಮುಖ್ಯೋಪಾದ್ಯಾಯಿನಿಯೊಬ್ಬರಿಗೆ ನಿವೃತ್ತಿ ಸಮ್ಮಾನ ಕೊಡದಿರುವುದು ಶಾಲಾ ಶಿಕ್ಷಕ ವಲಯ ಹಾಗೂ ಬೆಥನಿ ವಿದ್ಯಾಸಂಸ್ಥೆಗೂ ಅಸಮಧಾನದ ಮುಸುಕು ಆವರಿಸಿತ್ತು.

ಕೊನೆಗೂ ದಿನಾಂಕ 06-07-2020 ರಂದು ಶಾಲಾ ಸಭಾಂಗಣದಲ್ಲಿ ಸೀಮಿತ ಶಾಲಾ ಸಿಬ್ಬಂದಿಯೊಂದಿಗೆ ಭಗಿನಿ ಪೊಲೆಟ್‍ರವರ ಸಮ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಗಿನಿ ಪೊಲೆಟ್ ರವರು ತಮ್ಮ ಧಾರ್ಮಿಕ ಸೇವಾ ಕನಸನ್ನು ನನಸು ಮಾಡಿ, ಧಾರ್ಮಿಕ ಜೀವನಕ್ಕೆ ಅನುವು ಮಾಡಿಕೊಟ್ಟ ಬೆಥನಿ ಕನ್ಯಾಮಠವನ್ನು, ಬೆಥನಿ ಸಂಸ್ಥಾಪಕ ಗುರು ರೇಮಂಡ್ ಮಸ್ಕರೇನಸ್ ರವರನ್ನು ಸ್ಮರಿಸುತ್ತ ಶಿಕ್ಷಕ ವೃತ್ತಿಯ 25 ವರ್ಷಗಳ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಬೆಥನಿ ವಿದ್ಯಾಸಂಸ್ಥೆಗೂ ತಾವು ಚಿರರುಣಿಯಾಗಿರುವುದಾಗಿ ಹೇಳಿದರು. ಅಲ್ಲದೆ ತಮ್ಮ ಶೈಕ್ಷಣೆಕ ಸೇವಾ ಕಾರ್ಯದಲ್ಲಿ ಸಹಕರಿಸಿದ ಎಲ್ಲ ಭಗಿನಿಯರನ್ನು ಶಿಕ್ಷಕ ವರ್ಗದವರನ್ನು, ಶಿಕ್ಷಕೇತರರನ್ನು ಸ್ಮರಿಸಿ ಕೊಂಡಾಡಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕಿ ವಂ. ಭಗಿನಿ ಲಿಲ್ಲಿ ಆಂಜ್ ಬಿ.ಎಸ್. ಭಗಿನಿ ಪೊಲೆಟ್‍ರವರನ್ನು ಸನ್ಮಾನಿಸಿ ಅವರ ಶೈಕ್ಷಣಿಕ ಸೇವಾಕಾರ್ಯ, ತೋಟಗಾರಿಕೆಯ ತನ್ಮತೆಯನ್ನು ಮತ್ತು ಆಂಗ್ಲ ಭಾಷಾ  ಪ್ರೌಡಿಮೆಯನ್ನು ಮೆಚ್ಚಿ ಕೊಂಡಾಡಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಶಾಲಾ ಪ್ರಭಾರ ಮುಖ್ಯೋಪಾದ್ಯಾಯ ಪ್ರವೀನ್ ಕುಟಿನ್ಹಾರವರು ಅಭಿನಂದನಾ ಭಾಷಣಗೈದರು. ಶಾಲಾ ಶಿಕ್ಷಕಿ ಹಾಗೂ ಪ್ರೊವಿಡೆನ್ಸ್ ಕಾನ್ವೆಂಟಿನ  ಸುಪೀರಿಯರ್ ಭಗಿನಿ ಜೆನಿಟಾ ಬಿ.ಎಸ್. ರವರು ಪ್ರಾರ್ಥನಾ ವಿಧಿಗೈದು ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ನಾಗರಾಜ್ ಸ್ವಾಗತಗೈದರು. ಶಿಕ್ಷಕಿ ಸಿಲ್ವಿಯಾ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶಿಕ್ಷಕಿ ಆ್ಯಡಿ ಜೋಲಿ ವಂದಿಸಿದರು.

 ಸಂತ ಪೌಲರ ಪ್ರೌಢಶಾಲೆ, ಬಳಕುಂಜೆ