ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿ 41 ವರುಷಗಳ ಸುದೀರ್ಘ ಅವಧಿಯ ಶಿಕ್ಷಕ ವೃತ್ತಿಯ ಸಾರ್ಥಕ ಸೇವೆಯನ್ನು ನೀಡಿದ ಶ್ರೀಮತಿ ಡೋರತಿ ಮೇರಿ ಡಿ’ಸೋಜರವರ ಸನ್ಮಾನ ಕಾರ್ಯಕ್ರಮವು ದಿನಾಂಕ 31.08.2021 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೆಥನಿ ಶಿಕ್ಷಣ ಮಂಡಳಿಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕರಾದ ವಂದನೀಯ ಭಗಿನಿ ಶುಭ ಬಿ ಎಸ್ ವಹಿಸಿದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ, ಪೋಷಕರು, ದಂತವೈದ್ಯರಾದ ಡಾ ಶ್ರೀ ಪ್ರಕಾಶ್, ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಕ್ಲೇರಾ ಪೈಸ್ (Clara Pais), ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಮೇಶ್ ಕೆ ವಿ, ಶ್ರೀಮತಿ ಡೋರತಿ ಮೇರಿ ಡಿ’ಸೋಜರವರ ಪತಿ ಅಲೆಕ್ಸ್ ಮಿನೇಜಸ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಭಗಿನಿ ಪ್ರಶಾಂತಿ ಬಿ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಬ್ಯಾಂಡ್ ವಾದ್ಯತಂಡದೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ಬಳಿಕ ಬೆಥನಿ ಆಡಳಿತ ಮಂಡಳಿ, ಲಿಟ್ಲ್ ಫ್ಲವರ್ ಶಾಲಾ ವತಿಯಿಂದ ಹಾಗೂ ರಕ್ಷಕ-ಶಿಕ್ಷಕವತಿಯಿಂದ ಸನ್ಮಾನಿಸಲಾಯಿತು.

 

 

 

 

 

ಬಾಲಕೃಷ್ಣ ಪಿ., ಸಹಶಿಕ್ಷಕರು
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು