ಸೇವಾ ಜೀವನವನ್ನು ವಿದ್ಯೆ, ವಿದ್ಯಾರ್ಥಿಗಳು ಹಾಗೂ ವಿಕಾಸ ಈ ತ್ರಯ ಮಂತ್ರಗಳನ್ನೇ ಪಠಿಸುತ್ತಾ ಸರ್ಕಾರದ ನಿಯಮದನುಸಾರ ಸೇವಾ ನಿವೃತ್ತಿ ಹೊಂದಿದ ಶ್ರೀ. ಬಿ.ಜೆ ಪುಡ್ತಾದೋ ಗುರುಗಳಿಗೆ ದಿನಾಂಕ 01/09/2021 ರಂದು ವಿದಾಯ ಸಮಾರಂಭವನ್ನು ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಗಣ್ಯಮಾನ್ಯರನ್ನು ಶಾಲಾ ವಾದ್ಯ ವೃಂದ ಹಾಗೂ ಎನ್.ಸಿ.ಸಿ ಪದಾತಿ ದಳದ ಪಥ ಸಂಚಲನದೊಂದಿಗೆ ಗೌರವಪೂರ್ಣ ಸ್ವಾಗತ ಕೋರಲಾಯಿತು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪಶ್ಚಿಮ ಪ್ರಾಂತ್ಯ ಧಾರವಾಡದ ಪ್ರಾಂತ್ಯಾಧಿಕಾರಿಣಿಯವರಾದ ವಂ. ಭ|| ಸ್ಯಾಲಿ ಬಿ.ಎಸ್ ಹಾಗೂ ಮುಖ್ಯ ಅತಿಥಿ ಸ್ಥಾನವನ್ನು ವಂ. ಭ|| ರೋಸ್ ಆ್ಯನ್ ಬಿ.ಎಸ್ ರವರು ವಹಿಸಿಕೊಂಡಿದ್ದರು. ಸ್ಥಳೀಯ ಗ್ರಾತ್ಸಿಯ ಪ್ಲೇನಾ ಕಾನ್ವೆಂಟಿನ ಮುಖ್ಯಸ್ಥೆ ವಂ. ಭ|| ತೆರೆಸಿಯಾ ಬಿ.ಎಸ್ ಹಾಗೂ ವಂ.ಸ್ವಾಮಿ ಸ್ಟ್ಯಾನ್ಲಿ ಡಿಸೋಜಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಸರ್ವ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಸ್ವಾಗತ ಕೋರಿ, ಪ್ರಾರ್ಥನಾ ನೃತ್ಯ ಹಾಗೂ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಚಾಲನೆಯನ್ನು ನೀಡಲಾಯಿತು. “ಮುಂದೊಂದು ಗುರಿ ಇರಲಿ ಹಿಂದೊಬ್ಬ ಗುರು ಇರಲಿ” ಎಂಬ ನಾಣ್ಣುಡಿಯಂತೆ ತಮ್ಮ ಮೆಚ್ಚಿನ ಗುರುಗಳಾದ ಶ್ರೀಯುತ ಬಿ.ಜೆ. ಪುಟ್ತಾದೊ ರವರ ಕುರಿತು ಕುಮಾರಿ ಸುನೀತಾ ಯೆಡಗೆ ಹಾಗೂ ಕುಮಾರ ಪ್ರಸನ್ನ ಜೈನ್, ತಮ್ಮ ಸಹೋದ್ಯೋಗಿಯ ಕುರಿತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಸೈಮನ್ ಸಣ್ಣಕ್ಕಿ ಸರ್‍ರವರು ಅನಿಸಿಕೆಯ ನುಡಿಗಳನ್ನು ಭಾವಪೂರ್ಣವಾಗಿ ವ್ಯಕ್ತಪಡಿಸಿದರು.

ತದನಂತರ ಕಾರ್ಯಕ್ರಮದ ಸತ್ಕಾರ ಮೂರ್ತಿಗಳಾದ ಶ್ರೀಯುತ ಬಸ್ತ್ಯಾಂವ್ ಸರ್‍ರವರಿಗೆ ಅದ್ದೂರಿಯಾದ ಸನ್ಮಾನ ಕಾರ್ಯಕ್ರಮ ನೆರವೆರಿಸಲಾಯಿತು. ಬೆಥನಿ ವಿದ್ಯಾ ಸಂಸ್ಥೆ, ಆಡಳಿತ ಮಂಡಳಿ ಹಾಗೂ ಶಾಲೆಯ ಪರವಾಗಿ ಸನ್ಮಾನ ಪತ್ರ ವಾಚನ ಮಾಡಿ, ಶಾಲೆಯ ಮುಖ್ಯ ಶಿಕ್ಷಕಿ ವಂ. ಭಗಿನಿ ಲವಿನಾ ಬಿ.ಎಸ್ ರವರು ಅದನ್ನು ಗುರುಗಳಿಗೆ ಸಮರ್ಪಿಸಿದರು. ತದನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಒಟ್ಟು ಸೇರಿ ಭಾವಪೂರ್ಣವಾದ ಬೀಳ್ಕೊಡುಗೆಯ ಹಾಡನ್ನು ಹಾಡಿ ಪುಟ್ತಾದೊ ಗುರುಗಳಿಗೆ ಗೌರವ ಸಮರ್ಪಣೆ ಮಾಡಿದರು.

ಸತತ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶ್ರೀಯುತ ಬಸ್ತ್ಯಾಂವ್ ಜಾನ್ ಪುಟ್ತಾದೊ ಗುರುಗಳು ತಮ್ಮ ಸೇವಾ ಅವಧಿಯ ಸಕಲ ಸಿಹಿ-ಸವಿ ಘಟನೆಗಳನ್ನು ಸರ್ವರ ಮುಂದೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡ ವಂ. ಭ|| ಸ್ಯಾಲಿ ಬಿ.ಎಸ್ ರವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿ ಶ್ರೀ. ಬಿ.ಜೆ ಪುಡ್ತಾದೋ ಗುರುಗಳಿಗೆ ಅಭಿನಂದಿಸಿದರು.

 

 

 

 

 

 

 ಶ್ರೀ. ಸೆಬೆಸ್ಟಿಯನ್ ಗೊನ್ಸಾಲ್ವೀಸ್, ಗಣಿತ ಶಿಕ್ಷಕರು
ಸಂತ ಜೋಸೆಫರ ಆ. ಪ್ರೌಢ ಶಾಲೆ,ಸಂತಿಬಸ್ತವಾಡ

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]