ದಿನಾಂಕ 31.03.2024 ರಂದು ವಯೋನಿವೃತ್ತಿ ಹೊಂದುತ್ತಿರುವ ಜ್ಯೋತಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಸೋಮಶೇಖರ್ ಎನ್ ರವರ ಗೌರವಯುತವಾದ ಬೀಳ್ಕೊಡುಗೆ ಸಮಾರಂಭವನ್ನು ದಿನಾಂಕ 06.03.2024 ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಭಗಿನಿ ಸಹನ, ಬೆಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಯವರು ಅಧ್ಯಕ್ಷತೆಯನ್ನು ವಹಿಸಿ ಶ್ರೀ ಸೋಮಶೇಖರ್ ಸರ್ ರವರು ಜ್ಯೋತಿ ಪ್ರೌಢಶಾಲೆಯಲ್ಲಿ ನೀಡಿದ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿ ಅವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿದರು. ಭಗಿನಿ ಆನ್‍ಟ್ರಿಸಾ ಶಾಲಾ ಸಂಚಾಲಕಿಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬೆಥನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಯವರ ಪ್ರಶಂಸನಾ ಪತ್ರವನ್ನು ವಾಚಿಸಿದರು. ಸರ್ ಸೋಮಶೇಖರ್ ರವರು ಬೆಥನಿ ವಿದ್ಯಾಸಂಸ್ಥೆ ಮತ್ತು ಆಡಳಿತ ಮಂಡಳಿಗೆ ವಂದಿಸಿದರು. ಈ ಸಮಾರಂಭಕ್ಕೆ ಜ್ಯೋತಿ ಆವರಣದ ಎಲ್ಲಾ ಸಂಸ್ಥೆಗಳ ಸಿಬ್ಬಂದಿವರ್ಗದವರು, ಸೋಮಶೇಖರ್ ಸರ್ ರವರ ಕುಟುಂಬ ವರ್ಗದವರು ಹಾಗೂ ಹಿರಿಯ ವಿದ್ಯಾರ್ಥಿಗಳು ಆಗಮಿಸಿ ಆತ್ಮೀಯವಾಗಿ ಶುಭಕೋರಿ ಬೀಳ್ಕೊಟ್ಟರು.