ಶ್ರೀಮತಿ ಎಡ್ನ ಪ್ರೇಮ ಕುಮಾರಿಯವರು ಸೈಂಟ್ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಮೂವತ್ತೆಂಟು ವರ್ಷಗಳ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿ, ವಯೋನಿವೃತ್ತಿ ಹೊಂದಿದ್ದ ಇವರನ್ನು ದಿನಾಂಕ 15.11.2017 ರಂದು ಬೀಳ್ಕೊಡಲಾಯಿತು. ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಂಚಾಲಕಿಯಾಗಿರುವ ಭಗಿನಿ. ಮಾರಿಯೇಟ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ಬೆಥನಿ ಕಾನ್ವೆಂಟ್‍ನ ಮುಖ್ಯಸ್ಥರಾದ ಭಗಿನಿ. ಲೀನಾ ಪಿರೇರಾ, ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಮರ್ಸಿನ್ ಡಿ’ಸೋಜ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮಾನ್ ರಮೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಎಡ್ನ ಪ್ರೇಮ ಕುಮಾರಿಯವರ ವೃತ್ತಿ ನಿಷ್ಠೆ, ನಿಸ್ವಾರ್ಥ ಸೇವೆ, ಮಕ್ಕಳ ಮೇಲಿನ ಮಮತೆ,  ಪ್ರೀತಿ, ಆಡಳಿತ ಮಂಡಳಿಯ ಮೇಲಿರುವ ಹಾಗು ವಿಶ್ವಾಸವನ್ನು ಅಚಲ ಭಕ್ತಿ-ವಿಶ್ವಾಸವನ್ನು ಮುಕ್ತಕಂಠದಿಂದ ಅಧ್ಯಕ್ಷರು ಶ್ಲಾಘಿಸಿದರು. ಅವರ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸಿ, ಮುಂದಿನ ಜೀವನವು ಸುಖಮಯವಾಗಲಿ ಎಂದು ಹಾರೈಸಿ, ಆತ್ಮೀಯವಾಗಿ ಬೀಳ್ಕೊಟ್ಟರು.

Sr Mercine BS, Headmistress
St Sebastian Hr Pry School, Bendur

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]