ಶಿಕ್ಷಣ ಕ್ಷೇತ್ರದಲ್ಲಿ 23 ವರುಷಗಳ ಸೇವೆ ಸಲ್ಲಿಸಿದ ಚಿತ್ರಕಲೆ ಹಾಗೂ ಕರಕುಶಲಕಲೆ ಶಿಕ್ಷಕಿ ಭಗಿನಿ ಟ್ರೆಸ್ಸಿಯಾನ್ ಹಾಗೂ 30 ವರ್ಷ ಕನ್ನಡ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀ ರಾಮರಾಯ ಶ್ಯಾನುಭೋಗ್ ಎ (ರಾಂ ಎಲ್ಲಂಗಳ) ಇವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಶಿಕ್ಷಕದ್ವಯರಿಗೆ ಶುಭವಿದಾಯ ಸಮಾರಂಭ ಮೇ 31ರಂದು ವಾಮಂಜೂರಿನ ಅನುದಾನಿತ ಸೈಂಟ್ ರೇಮಂಡ್ಸ್ ಪ್ರೌಢಶಾಲೆಯಲ್ಲಿ ಜರಗಿತು. ಬೆಥನಿ ವಿದ್ಯಾ ಸಂಸ್ಥೆ, ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಭಗಿನಿ ಮಾರಿಯೋಲಾ ಅಧ್ಯಕ್ಷತೆ ವಹಿಸಿ ಶಿಕ್ಷಕದ್ವಯರು ನೀಡಿದ ಅಮೂಲ್ಯ ಸೇವೆಯನ್ನು ಕೊಂಡಾಡಿ ಅವರ ನಿವೃತ್ತ ಜೀವನವು ದೇವರ ಆಶೀರ್ವಾದದಿಂದ ಶಾಂತಿ ಸಮಾಧಾನ ಹಾಗೂ ಆರೋಗ್ಯದಾಯಕವಾಗಲಿ ಎಂದು ಹರಸಿದರು. ಬೆಥನಿ ಆಡಳಿತ ಮಂಡಳಿ ಹಾಗೂ ಶಾಲಾ ಪರವಾಗಿ ಶಿಕಕ್ಷದ್ವಯರನ್ನು ಗೌರವಿಸಿದರು. ಶಾಲಾ ಸಂಚಾಲಕಿ ಭಗಿನಿ ಸಿಬಲ್ ಆಡಳಿತ ಮಂಡಳಿ ಪರವಾಗಿ ಶುಭಸಂಶನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾರ್ಗರೆಟ್ ಡಿ’ ಸೋಜಾ ಸಂಘದ ಸದಸ್ಯರ ಜೊತೆಗೂಡಿ ಶಿಕ್ಷಕರನ್ನು ಗೌರವಿಸಿದರು. ಶಿಕ್ಷಕರ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಡೊನಾಲ್ಡ್ ಲೋಬೊ ಹಾಗೂ ವಿದ್ಯಾರ್ಥಿಗಳ ಪರವಾಗಿ ಅನ್ಸಿಲ್ಲಾ ಡಿ’ ಸೋಜಾ ಮತ್ತು ತಂಶೀರಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶುಭಕೋರಿದರು. ನಿವೃತ್ತ ಶಿಕ್ಷಕದ್ವಯರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡು ಎಲ್ಲರನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಮರ್ಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ರೋಶನಿ ಎಲ್ಲರನ್ನು ಸ್ವಾಗತಿಸಿದರು. ಭಗಿನಿ ಜಯಾ ವಂದನಾರ್ಪನೆ ಗೈದರು. ಶಿಕ್ಷಕ ಶ್ರೀ ವಿನ್ಸೆಂಟ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.

Richard Alvares, Asst Teacher
St Raymond High School, Vamanjoor