ಪ್ರಸ್ತುತ ಶೈಕ್ಷಣಿಕ ವರ್ಷದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್‍ಬ್ಯಾಡ್ಮಿಂಟನ್ ಕ್ರೀಡಾಕೂಟವು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಅಳಿಯೂರಿನಲ್ಲಿ ದಿನಾಂಕ 3.11.2018 ರಂದು ಆಯೋಜಿಸಿದ್ದರು. ಈ ಕ್ರೀಡಾಕೂಟದಲ್ಲಿ ಶಿರಸಿಯ ಆವೆಮರಿಯಾ ಪ್ರೌಢ ಶಾಲೆಯ ಬಾಲಕ ಹಾಗೂ ಬಾಲಕಿಯರ ಬಾಲ್‍ಬ್ಯಾಡ್ಮಿಂಟನ್ ತಂಡಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುವರು. 5 ವಿದ್ಯಾರ್ಥಿಗಳಾದ ರೋಹಿತ್ ಶೆಟ್ಟಿ, ಚೈತನ್ಯ ಕಾಂತು, ಲಖನ್ ಜೈವಂತ, ಗಿಬ್ಸನ್ ಡಿಸೋಜಾ ಹಾಗೂ ಆದಿತ್ಯ ನಾಯ್ಕ್ ಇವರು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲ್ಲಿ ದಿನಾಂಕ 7.1.2019 ರಿಂದ 11.1.2019ರ ವರೆಗೆ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ.

ರಾಜ್ಯ ಮಟ್ಟದ 16 ವರ್ಷ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್  ಕ್ರೀಡಾಕೂಟವು ಭದ್ರಾವತಿಯಲ್ಲಿ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯರ ತಂಡ ತೃತೀಯ ಸ್ಥಾನ ಗಳಿಸುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುವರು. ಇಬ್ಬರು ವಿದ್ಯಾರ್ಥಿಗಳಾದ ಐಶ್ವರ್ಯ ಎಸ್. ಎಮ್. ಹಾಗೂ ಹರ್ಷ ನಾಯ್ಕ ಕೇರಳದ ತ್ರಿಶೂರಿನ ಕೊಡಂಗನೆಲ್ಲೂರಿ ನಲ್ಲಿ ದಿನಾಂಕ 23.01.2019 ರಿಂದ 27.01.2019ರ ವರೆಗೆ ನಡೆದ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಐಶ್ವರ್ಯ ಎಸ್. ಎಮ್. ಇವರು ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನದ ಸಾಧನೆಯನ್ನು ಮಾಡಿ ಶಾಲೆಗೆ ಹೆಸರನ್ನು ಗಳಿಸಿರುವರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರನ್ನು ತರಬೇತಿ ನೀಡಿದ ಶಿಕ್ಷಕರಿಗೂ ಅಭಿನಂದನೆಗಳು.

ರಾಜ್ಯ ಮಟ್ಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು:
ರಾಜ್ಯ ಮಟ್ಟದ ಬಾಲಕರ ವಿಭಾಗದ ಬಾಲ್ ಬಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ: ರೋಹಿತ್ ಶೆಟ್ಟಿ, ಚೈತನ್ಯ ಕಾಂತು, ಲಖನ್ ಜೈವಂತ, ಚಂದನ ನೀರಲಗಿ, ಗಿಬ್ಸನ್ ಡಿಸೋಜಾ, ಆದಿತ್ಯ ನಾಯ್ಕ್ ಹರ್ಷ ನಾಯ್ಕ, ಆಯುಷ ನಾಯ್ಕ, ಮಾಣಿಕ್ಯ ಆಚಾರ್ಯ, ಇರ್ಷಾದ ಶೇಖ್. ಸೂರಜ ಲಮಾಣಿ, ರಜತ್ ತಳವಾರ, ಎಚ್. ಸಿ. ಉಲ್ಲಾಸ, ಚಿರಾಗ ಕಾಮತ, ಚಂದನ ನಾಯ್ಕ.
ರಾಜ್ಯ ಮಟ್ಟದ ಬಾಲಕಿಯರ ವಿಭಾಗದ ಬಾಲ್ ಬಾಡ್ಮಿಂಟನ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ: ನೇಹಾ ನಾಯ್ಕ್,  ಶ್ರೀರಕ್ಷಾ ನಾಯ್ಕ್, ಐಶ್ವರ್ಯ ಎಸ್. ಎಮ್, ಗಾಯತ್ರಿ ಭಟ್ಕಳ, ವೈóಷ್ಣವಿ ರೇವಣಕರ, ವೇದಾ ಶಿರಾಲಿ, ಎಸ್. ಮೇಘನಾ, ರಕ್ಷಿತಾ ಜೈವಂತ, ಲಿಯೋನಾ ಫರ್ನಾಂಡಿಸ್.

 

 

    ಆವೆ ಮರಿಯಾ ಪ್ರೌಢ ಶಾಲೆ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]