ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ದೈಹಿಕ ಸಾಮಥ್ರ್ಯ ಮತ್ತು ಸ್ಪರ್ಧಿಯ ಕೌಶಲ್ಯಗಳನ್ನು ನಿರ್ಧರಿಸುವ ಕ್ರೀಡೆ, ಸೋಲು ಮತ್ತು ಸಾಧನೆಯಲ್ಲಿ ಮಕ್ಕಳನ್ನು ಪ್ರಬಲರನ್ನಾಗಿಸುತ್ತದೆ. ಮಕ್ಕಳ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆ ಒಂದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ಕ್ರೀಡೆಯಲ್ಲಿ ಗೆದ್ದು ಅದನ್ನು ಸಂಭ್ರಮಿಸುವ ಪರಿಯೇ ಬೇರೆ.

ಇಂತಹ ಸಂಭ್ರಮದ ದಿನಕ್ಕೆ ಸಾಕ್ಷಿಯಾಗಿ 2022-23ರ ಆಗಸ್ಟ್ 18 ರಂದು ಹೋಬಳಿ ಮಟ್ಟದ ಕ್ರೀಡೆಯಲ್ಲಿ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪ್ರದರ್ಶನ. ವಾಲಿಬಾಲ್, ತ್ರೋಬಾಲ್, ರಿಲೇ, ಚಕ್ರ ಎಸೆತ, ಗುಂಡು ಎಸೆತ ಮತ್ತು ರನ್ನಿಂಗ್ ಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸಿದ್ದು ವಿಶೇಷ. ಮುಖ್ಯ ಗುರುಗಳಾದ ಭಗಿನಿ ಅವೇಲಿನ್ ರವರು ಪ್ರತಿ ಸಾರಿ ಮಕ್ಕಳಿಗೆ ಹೇಳುವಂತೆ "Co-operation is powerful than competition" ಎಂಬ ಉಕ್ತಿಯನ್ನು ಮನದಲ್ಲಿ ಸ್ಮರಿಸಿ, ಒಗ್ಗಟ್ಟಾಗಿ ಏಕ ಚಿತ್ತದಿಂದ ಆಟವಾಡಿದ ಮಕ್ಕಳ ಆಟದ ಶೈಲಿ ಹಾಗೂ ಶಿಸ್ತುಬದ್ಧತೆ ತೀರ್ಪುಗಾರರ ಗಮನ ಸೆಳೆದಿದ್ದು ವಿಶೇಷ. ಈ ಸಾಧನೆಗೆ ಸ್ವತಃ ಮಕ್ಕಳೇ, ಮುಖ್ಯ ಗುರುಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ಶ್ರೀಯುತ ಅರುಣ್ ದೊಡ್ಡಮನಿ ರವರಿಗೆ ಅಭಿನಂದನೆ ಸಲ್ಲಿಸಿ ತಮ್ಮ ಸಾಧನೆಯ ಸ್ಪೂರ್ತಿ ಗುರುಗಳೇ ಎಂದು ಹೇಳಿದ್ದು ಬೆಥನಿ ಶಿಕ್ಷಣ ಸಂಸ್ಥೆಯ ಮೌಲ್ಯದ ಪ್ರತೀಕವಾಗಿದೆ.

ಶ್ರೀಯುತ ಅರುಣ್ ದೊಡ್ಡಮನಿ, ದೈಹಿಕ ಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ