ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಪಿ ಎಂ ಶ್ರೀ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು, ಸತತ 2ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೆÇರ್ದಾಲ್ ಹಾಗೂ ಹಿರಿಯ ಶಿಕ್ಷಕಿ ವಿಲ್ಮಾ ಫೆನಾರ್ಂಡಿಸ್ ತರಬೇತಿ ನೀಡಿದ್ದಾರೆ. ಸವ್ಯ ಸಾಚಿ ಆಟಗಾರ್ತಿ ಜುಏನ ಡ್ಯಾಝಲ್ ಕುಟಿನ್ಹಾ ಉತ್ತಮ ಹಿಡಿತಗಾರ್ತಿಯಾಗಿ ಸನ್ನಿದಿ ಮೂಡಿ ಬಂದರು. ಜೆನಿಟಾ, ಜಶ್ಮಿತಾ, ಸುಶ್ರಾವ್ಯ, ಫಾತಿಮತ್ ಅಫ್ರ, ಆಯಿಷತ್ ಶೈಮ, ಹಾರ್ದಿಕ, ಸಾಕ್ಷಿ, ಅನ್ವಿತಾ, ಅನ್ವಿ, ಜೀವಿಕಾ ತಂಡದ ಇತರ ಆಟ ಗಾರ್ತಿಯರು.
ಬಾಲಕೃಷ್ಣ ಪಿ, ಸಹ ಶಿಕ್ಷಕರು
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು