ಮರಣದ ಗುಹೆಯೊಳಗೆ

ಸಾವಿನ ಬಾಗಿಲಲ್ಲೇ ನಿಂತು
ಕದ ತಟ್ಟುತ್ತಿರುವ ಸೋಂಕಿತರ   
ಸೇವೆಗೈಯುತಿಹ ದೇವದೂತರೆ
ಏನೆಂದು ಬಣ್ಣಿಸಲಿ ನಿಮ್ಮ

ತನ್ನವರ ಜೋಪಾನಮಾಡಿ
ಮನೆಯೊಳ್ಳಿಟ್ಟು ಕಾಪಾಡಿ
ತಾನೊಬ್ಬನೇ ಹೊರಟಿಹನು ಜೀವದಾನಕೆ
ಏನೆಂದು ಬಣ್ಣಿಸಲಿ ನಿಮ್ಮ

ಕಣ್ಣತುಂಬಾ ಹೆದರಿಕೆಯ ನೋಟ ತುಂಬಿ
ನೀನೊಬ್ಬನೇ ಆಸರೆ ಎಂದು ನಂಬಿ
ನರಳುತ್ತಿರುವ ಮನಕೆ ಬೆಳಕು ನೀಡುತ್ತಿರುವೆ
ಏನೆಂದು ಬಣ್ಣಿಸಲಿ ನಿಮ್ಮ

ಮರಣದ ಗುಹೆಯೊಳಗೆ ತಾನಿರುವೆನೆಂದು ಮರೆತು
ಪರರಿಗಾಗಿ ಈ ಜೀವ ಎಂದು ನೀವ್ ಬೆರೆತು
ನೋವ ನುಂಗಿ ಉಸಿರು ನೀಡುತ್ತಿರುವೆ
ಏನೆಂದು ಬಣ್ಣಿಸಲಿ ನಿಮ್ಮ

ಗುಡಿಯಲ್ಲಿರುವ ದೇವರನ್ನು ನಿಮ್ಮಲ್ಲೇ ಕಂಡೆ
ಕೈಯ ಮುಗಿದು ನಾವು ಶರಣೆಂಬೆವು ತಂದೆ
ಉಸಿರ ಉಳಿವಿಗಾಗಿ ತನ್ನ ಜೀವ ಮುಡಿಪಿಟ್ಟವರೇ
ಏನೆಂದು ಬಣ್ಣಿಸಲಿ ನಿಮ್ಮ

ಈ ಕವಿತೆ ಕೋವಿಡ್ 19 ನಿರ್ಮೂಲನೆಗಾಗಿ ಹಗಲಿರುಳು ದುಡಿಯತ್ತಿರುವ ಪ್ರಪಂಚದ ಎಲ್ಲಾ ವೈದ್ಯಕೀಯ ಕ್ಶೇತ್ರ, ಅರಕ್ಶಕ ಇಲಾಖೆ, ಸ್ವಚ್ಛತಾ
ಪರಿಪಾಲಕರು, ಸೈನಿಕರು ಹಾಗೂ ಪತ್ರಕರ್ತರಿಗೆ ಸಮರ್ಪಣೆ

 

 

 

 

 

 

 

 

 

gÁåQä ¥Àæ«Ãuï JA. F, ¸ÀºÀ ²PÀëQ

¸ÀAvÀ CAvÉÆÃt »jAiÀÄ ¥ÁæxÀ«ÄPÀ ±Á¯É

¥ÉÆ£ÀßA¥ÉÃmÉ, zÀ PÉÆqÀUÀÄ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]