ಕೊರೋನಾ

ನೀನು ಅಣು ಬಾಂಬು ಅಲ್ಲ                                         
ಸುಡು ಬಾಂಬೂ ಅಲ್ಲ !
ಜಲ ವಾಯು ನೆಲದ ಮೇಲಿನ
ಶತ್ರು ಸೈನ್ಯ ಪಡೆಯಂತೂ ಅಲ್ಲವೇ ಅಲ್ಲ!
ಸ್ವಂತ ಅಸ್ತಿತ್ವವೇ ಇಲ್ಲದ
ಯಃಕಶ್ಚಿತ್ ವೈರಾಣು !
ಕಣ್ಣಿಗೆ ಕಾಣದೇ ಯುದ್ಧ ಮಾಡುವ ವೈರಿ !
ನಿನ್ನ ಹಬ್ಬುವಿಕೆಗೆ ತಬ್ಬಿಬ್ಬಾಗಿದೆ ಜಗತ್ತು
ಸ್ತಬ್ಧವಾಗಿದೆ ಪ್ರಪಂಚದ ವಹಿವಾಟು !
ಶಾಲೆ, ಶೂ, ಟೈ, ಬ್ಯಾಗುಗಳು ಮೂಲೆಗೆ ಕೂತಿವೆ !
ಆಫೀಸು ಬಾಸು ಬಸ್ಸುಗಳು ತಣ್ಣಗಾಗಿವೆ !
ಬಡವ-ಬಲ್ಲಿದರೆನ್ನದೆ ಜನ ಸಂಪರ್ಕದಿಂದ ದೂರ..ದೂರ !
ನಿರ್ಗತಿಕರು ಕೂಲಿ ಕಾರ್ಮಿಕರು ರಸ್ತೆ ಪಾಲು !
ಮುಗ್ಗರಿಸಿದೆ ಆರ್ಥಿಕತೆ, ಚೀತ್ಕರಿಸಿದೆ ಅಸಹಾಯಕತೆ !                                                                                                                                                
ಸೃಷ್ಟಿಯನ್ನೇ ಮರುಸೃಷ್ಟಿಸಲು
ಅಟ್ಟಣಿಕೆ ಹಾಕಿರುವ
ವಿಜ್ಞಾನ, ತಂತ್ರಜ್ಞಾನ
ಅಜ್ಞಾನಕ್ಕೆ ಮಂಡಿಯೂರಿವೆ !
ಎಸೆದವರು ಭಗವಂತನಿಗೆ ಸವಾಲು,
ಹೆಸರನ್ನೇ ಅರಿಯದ, ಅಗೋಚರ
ಕೊರೋನಾಗೆ ಕಂಗಾಲು!
ತಲೆಗೊಂದರಂತೆ ಮಾತುಗಳು !
ಶಾಪ !ದೈವಕೋಪ !ಪಾಪದ ಕೊಡ
ತುಂಬಿದ ಫಲ ! ವಿನಾಶದ ಮುನ್ಸೂಚನೆ !
ವ್ಹಾವ್ ! ಕೊರೋನಾ, ಮೆಚ್ಚಿದೆ ನಿನ್ನ ಯುದ್ಧ ಧರ್ಮಕ್ಕೆ !
ಶಸ್ತ್ರಾಸ್ತ್ರ, ರಕ್ತಪಾತವಿಲ್ಲದ ಸಮರ ತಂತ್ರಕ್ಕೆ !
ಲೋಕವನ್ನಿಡೀ ಅಲ್ಲೋಲ ಕಲ್ಲೋಲ
ಮಾಡಿದ ಪೌರುಷಕ್ಕೆ !
ಇಷ್ಟೆಲ್ಲಾ ಅವಾಂತರಗಳ ನಡುವೆಯೂ
ನೀನು ಕಲಿಸಿದ ಪಾಠ ಶ್ರೇಷ್ಠ !
ಜಗತ್ತಿಡೀ ಶಾಂತಿ, ಪ್ರೀತಿ, ಸೇವೆಯನ್ನು
ಈ ಪರಿ ಹಬ್ಬುವುದಾದರೆ..... ???

 

 

 

 

 

 

 

 

 

ವೈಲೆಟ್ ಪಿಂಟೋ, ¸ÀºÀ ²PÀëQ

¸ÉÊAmï ªÉÄÃj¸ï ¥ÀzÀ« ¥ÀǪÀ9 PÁ¯ÉÃdÄ, ಅರಸೀಕೆರೆ

 

 

 

 

 

 

 

 


 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]