“ಧರ್ಮ ಎಂದರೆ ಕೇವಲ ಆಚರಣೆ ಅಲ್ಲ, ಸತ್ಯ ಧರ್ಮದಲ್ಲಿ ಬದುಕುದಾಗಿದೆ. ಜಗತ್ತಿನ ಎಲ್ಲಾ ಧರ್ಮ ಸಿದ್ಧಾಂತಗಳು ಮಾನವೀಯತೆಯ ಚಿಂತನೆ ಸಾರಿವೆ” ಎಂದು ಚಿತ್ತಾಪುರಿನ ಮೌಲ್ವಿಗಳಾದ ಯಾಸಿನ್ ಮಹಮದರವರು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರನಲ್ಲಿ ನಡೆದ ಕ್ರಿಸ್ಮಸ್ ಸ್ನೇಹಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ವಂದನಿಯ ಗುರುಗಳಾದ ಫೆಡ್ರಿಕ್ ಡಿಸೋಜಾರವರು ಕ್ರಿಸ್ಮಸ್ ಸಂದೇಶವನ್ನು ನೀಡುತ್ತಾಮಾನವರಲ್ಲಿ ಪರಸ್ಪರ ಪ್ರೀತಿಸುವ ಗುಣ, ಪರರ ತಪ್ಪನ್ನು ಕ್ಷಮಿಸುವ ಧರ್ಮವಿದ್ದಾಗ ಮಾತ್ರ ಶಾಂತಿ ನೆಲೆಸುತ್ತದೆ. ಭಗವಾನ್ ಕ್ರಿಸ್ತರು ಈ ಶಾಂತಿಯ ಪ್ರತಿಪಾದಕರಾಗಿ ಜಗತ್ತಿಗೆ ಶಾಂತಿಯನ್ನು ತಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳಿಂದ ಮಕ್ಕಳಿಗೆ ಸಂಸ್ಕøತಿಯ ಸಂದೇಶ ನೀಡಿದ ಭಗಿನಿ ಲೂಸಿ ಪ್ರಿಯರವರು ಆದರ್ಶಗಳು ಕೇವಲ ಹೇಳುವುದಕ್ಕಲ್ಲ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅವುಗಳನ್ನು ಬಳಸಿಕೊಂಡು ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಧರ್ಮವನ್ನು ಅರ್ಥಮಾಡಿಕೊಳ್ಳದೆ ಅದರ ಹೆಸರಿನಲ್ಲಿ ಕಲಹ ಮಾಡುವ ಜನರ ನಡುವೆ, ಪ್ರೀತಿ, ಸಾಮರಸ್ಯ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಭಾರತವು ಎಲ್ಲಾ ಧರ್ಮಗಳಿಗೂ ಅವಕಾಶ ನೀಡಿದ ಪುಣ್ಯಭೂಮಿಯಾಗಿದೆ. ನಮ್ಮ ಅಭಿಮಾನಕ್ಕೆ ಹೊಂದುವ ಧರ್ಮವನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ತತ್ಪರರಾಗಲು ಕರೆ ನೀಡಿದರು.

ಮುಖ್ಯ ಗುರುಗಳಾದ ಭಗಿನಿ ಅವೆಲಿನರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿಯರಾದ ಭಗಿನಿ ಸಿಂತಿಯಾ ಸಿಕ್ವೇರಾ ಹಾಜರಿದ್ದರು. ಕ್ರಿಸ್ಮಸ್ ನೃತ್ಯ ರೂಪಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮಗಳಲ್ಲಿ ಐಕ್ಯತೆ ಮೂಡಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ.

 

 

 

 

 

 

 

 

 

 

ಶ್ರೀಮತಿ ರಾಜೇಶ್ರೀ.ಕೆ. ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ, ಚಿತ್ತಾಪುರ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]