July 04: ಬೆಥನಿ ಪ್ರೌಢ ಶಾಲೆ ಹಾಗೂ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಸಿಸ್ಟರ್ ಸಿಂಥಿಯಾರವರು ಇರ್ವ ಶಾಲೆಯ ಶಿಕ್ಷಕರನ್ನೂ ದಿನಾಂಕ 12.06.2023 ರಂದು ಒಟ್ಟುಗೂಡಿಸಿ ಇಂದಿನ ಜಗತ್ತಿನ ಸೂಕ್ಷ್ಮ ವಿಚಾರವಾದ ಮಕ್ಕಳ ಲೈಂಗಿಕ ವಿಚಾರದ ಕಾಯ್ದೆಯಾಗಿರುವ ಪೋಕ್ಸೊ ಬಗ್ಗೆ ಸೂಕ್ಷ್ಮವಾಗಿ ವಿವರಿಸಲು ಬಂದಿದ್ದರು. ಅವರನ್ನು ಶ್ರೀಯುತ ವಿಶ್ವನಾಥರವರು ಆತ್ಮೀಯತೆಯಿಂದ ಸ್ವಾಗತಿಸಿದರು.

ಸಿಸ್ಟರ್ ಸಿಂಥಿಯಾ ಅವರು ಪೋಕ್ಸೊ ಆಕ್ಟ್ ಜಾರಿಗೆ ಬಂದಿದ್ದರ ಉದ್ದೇಶ, ಇದರಡಿಯಲ್ಲಿ ಆಗುವ ಅಪರಾಧಗಳು, ಆ ಅಪರಾಧಗಳಿಗೆ ಕೊಡುವ ಶಿಕ್ಷೆಯ ಮಟ್ಟ ಹಾಗೂ ಇದರ ಬಗ್ಗೆ ದೂರು ಕೊಡುವುದು ಮುಂತಾದ ವಿಷಯಗಳನ್ನು ವಿವರವಾಗಿ ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಸ್ಟರ್ ಸಿಂಥಿಯಾ ಅವರು ತಮಗಾದ ಅನುಭವಗಳನ್ನು ಉದಾಹರಣೆಗಳೊಂದಿಗೆ ಮಕ್ಕಳಿಗೆ ಕೇವಲ ಅಪರಿಚಿತರಿಂದ ಅಷ್ಟೇ ಅಲ್ಲದೇ ಪರಿಚಯವಿರುವವರಿಂದಲೂ ಅಪಾಯ ಇರಬಹುದು ಎಂಬ ವಿಷಯವನ್ನು ಎಲ್ಲ ಶಿಕ್ಷಕರಲ್ಲಿ ಮನಮುಟ್ಟುವಂತೆ ತಿಳಿಸಿ ಹೇಳಿದರು. ಶಿಕ್ಷಕ ವೃತ್ತಿಯಲ್ಲಿರುವವರು ಬಹುಜಾಗರೂಕತೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ಬಹುಸೂಕ್ಷ್ಮವಾಗಿ ಕಿವಿಮಾತನ್ನು ಹೇಳಿದರು.

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]