August 11: ಶಿಕ್ಷಕರು ಮತ್ತು ಪಾಲಕರು ಮಕ್ಕಳ ಉಜ್ವಲ ಭವಿಷ್ಯದ ರಚನಾಕರ್ತರಾಗಿದ್ದಾರೆ. ಈ ವಿಷಯವನ್ನರಿತ ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಅವರು ಆಗಸ್ಟ್ 1, 2, 3 ರ ದಿನಾಂಕಗಳಂದು ಕ್ರಮವಾಗಿ 8, 9, 10 ನೇ ತರಗತಿಯ ಮಕ್ಕಳ ಪಾಲಕರ ಸಭೆಯನ್ನು ಏರ್ಪಡಿಸಿದ್ದರು. ಸಭೆಗಳು ಪ್ರಾರ್ಥನೆಯೊಂದಿಗೆ ಪ್ರಾರಂಭವಾದವು. ಜೊತೆಗೆ ಪ್ರತಿ ತರಗತಿಯ ಪಾಲಕರ ಸಭೆಗಳಲ್ಲಿ ಅವರವರ ಮಟ್ಟದಲ್ಲಿಯೇ ಸಲಹೆ ಸೂಚನೆಗಳನ್ನು ಕೊಡಲು, ಅಲ್ಲದೆ ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರವೇನು? ಎಂಬುದನ್ನು ವಿವರಿಸಲು ನುರಿತ ಅನುಭವಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆರಿಸಿದ್ದರು. ಅವರು ಯಶಸ್ವಿಯಾಗಿ ಪಾಲಕರ ಮನಮುಟ್ಟುವಂತೆ ಹಲವಾರು ಜೀವಂತ ಉದಾರಹಣೆಗಳ ಮತ್ತು ಚಟುವಟಿಕೆಗಳ ಮೂಲಕ ಮನೋಜ್ಞವಾಗಿ ವಿವರಿಸಿದರು. ಇದಲ್ಲದೆ ಪಾಲಕರ ಮತ್ತು ಮಕ್ಕಳ ಕರ್ತವ್ಯಗಳನ್ನು ಲಿಖಿತವಾಗಿ ಅವರ ಕೈಯಲ್ಲಿ ಕೊಟ್ಟು ಶಿಕ್ಷಕರಿಂದ ಓದಿಸಿ ವಿವರಿಸಲಾಯಿತು. ಇನ್ನು ಕಾರ್ಯಕ್ರಮದ ಕೇಂದ್ರ ಬಿಂದುವೆಂಬಂತೆ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಚಿರಪರಿಚಿತ ಪಾಲಕರ ಅರ್ಹತೆಗೆ ತಕ್ಕಂತೆ ಅವರ ಮಕ್ಕಳ ಪ್ರಸ್ತುತ ನಡವಳಿಕೆಗಳನ್ನು ಮಾದರಿಯಾಗಿಟ್ಟುಕೊಂಡು ಪಾಲಕರಿಗೆ ಹಲವಾರು ಕಿವಿಮಾತುಗಳನ್ನು ತಿಳಿ ಹೇಳಿದರು. ವಂದನಾರ್ಪಣೆ ಮತ್ತು ಚಹಾಕೂಟದೊಂದಿಗೆ ಸಭೆಗಳನ್ನು ಮುಕ್ತಾಯಗೊಳಿಸಲಾಯಿತು.

 

 

 

ಶ್ರೀಯುತ ಮಲ್ಲಿಕಾರ್ಜುನ ರಾವೂರ, ಸಹಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]