Sep 22: ದೇಶ, ರಾಜ್ಯದಲ್ಲಿ ಸಹಸ್ರಾರು ಶಾಲಾ ಕಾಲೇಜುಗಳಿವೆ. ಆದರೂ ಪ್ರಜ್ಞಾವಂತರು ಹೊರಬರುತ್ತಿಲ್ಲ. ಸಮಾಜ ಎಷ್ಟೇ ಪ್ರಗತಿ ಸಾಧಿಸಿದ್ದರೂ ಜನರ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಇನ್ನೂ ಮೌಢ್ಯದಿಂದ ಹೊರಬರುತ್ತಿಲ್ಲ ಎಂಬ ವಿಷಯದ ಬಗ್ಗೆ ತಮ್ಮ ಕೈಲಾದ ಪ್ರಯತ್ನ ಮಾಡಬೇಕೆಂಬ ಆಶಯದಿಂದ ಸಿ.ಕವಿತಾ ಅವರು ಪಾಲಕ-ಶಿಕ್ಷಕ ಸಮಿತಿಯ ಸಹ ಅಧ್ಯಕ್ಷರಾದ ಶ್ರೀಯುತ ಶಾಂತಕುಮಾರ ಮಳಖೇಡ ಅವರ ಜೊತೆ ಮಾತನಾಡಿ ಒಂದು ದಿಟ್ಟ ಹೆಜ್ಜೆ ಇಟ್ಟಿದ್ದರ ಪರಿಣಾಮವೇ “ಜ್ಞಾನದ ಬಲದಿಂದ ಅಜ್ಞಾನದ ಕೇಡು” ಎಂಬ ಕಾರ್ಯಕ್ರಮ ಹೊರಹೊಮ್ಮಲು ಕಾರಣವಾಯಿತು.


ಅವರು ಮಕ್ಕಳನ್ನು ಕುರಿತು ವಿದ್ಯಾರ್ಥಿಗಳು ಯಾವತ್ತೂ, ಯಾಕೆ? ಎಂಬ ಪ್ರಶ್ನೇ ಕೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಯತ್ನದಿಂದ ಎಲ್ಲವೂ ಸಾಧ್ಯ ಹೊರತು ಪೂಜೆ, ಪುನಸ್ಕಾರಗಳು ಎಂಬ ಮೂಢನಂಬಿಕೆಗಳಿಂದಲ್ಲ, ಕೀಳರಿಮೆ ಬಿಟ್ಟು ಆತ್ಮಬಲ ಹೊಂದಬೇಕು. ವಿಜ್ಞಾನದ ಜ್ಯೋತಿ ಹಚ್ಚುವ ಮೂಲಕ ಸಮಾಜಕ್ಕೆ ಬೆಳಕಾಗಬೇಕು ಎಂಬ ಹತ್ತು ಹಲವಾರು ವಿಷಯಗಳನ್ನು ಮಕ್ಕಳ ಮನಮುಟ್ಟುವಂತೆ ಬಸವಣ್ಣನವರ ವಚನವಾದ


ಕಲ್ಲ ನಾಗರ ಕಂಡರೆ ಹಾಲನೆರೆಂಬರು
ದಿಟವ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದರೆ ನಡೆ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯಂಬರಯ್ಯ
ನಮ್ಮ ಕೂಡಲ ಸಂಗನ ಶರಣರ ಕಂಡು
ಉದಾಸೀನವ ಮಾಡಿದಡೆ ಕಲ್ಲು ತಾಗಿದ
ಮಿಟ್ಟಯಂತಪ್ಪರಯ್ಯಾ
ಎಂಬುದರ ಮೂಲಕ ಮನೋಜ್ಞವಾಗಿ ತಿಳಿಸಿ ಹೇಳಿದರು.

ಶ್ರೀಮತಿ ಅರ್ಚನಾ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]