Dec 09: ಮನುಷ್ಯ ಸಮಾಜ ಜೀವಿ. ಅವನು ಸಮಾಜದ ಅವಿಭಾಜ್ಯ ಅಂಗ. ಅಂದ ಮೇಲೆ ಸಮಾಜದಲ್ಲಿ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಮನುಷ್ಯ ಮನುಷ್ಯನಲ್ಲಿ ಭೇದಭಾವಗಳು ಉದ್ಭವಿಸಿ ತಂಟೆ ತಕರಾರುಗಳುಂಟಾಗುತ್ತವೆ. ಅಂತಹವುಗಳಲ್ಲಿ ಹೆಣ್ಣುಮಕ್ಕಳಿಗೂ ಕೂಡ ಕೆಲವು ಸಂದರ್ಭಗಳಲ್ಲಿ ಕೀಳಾಗಿ ಕಂಡು ಅವರ ಮೇಲೆ ಹಲವು ರೀತಿಯಲ್ಲಿ ದೌರ್ಜನ್ಯಗಳಾಗುತ್ತವೆ.

ಈ ಒಂದು ಹಿನ್ನೆಲೆಯಲ್ಲಿಯೇ ಸರ್ಕಾರವು 2012 ಮೇ 22 ರಂದು POSCO ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಉದ್ದೇಶ ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳಾಗದಂತೆ ನೋಡಿಕೊಳ್ಳುವುದಾಗಿದೆ. ಇದು ಶಿಕ್ಷಣ ಕ್ಷೇತ್ರಕ್ಕೂ ಹಬ್ಬಿ ಶಾಲೆಗಳಲ್ಲೂ ಕೂಡ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಈ ಕಾಯ್ದೆಯ ಮಾಹಿತಿ ಕೊಡುವ ಜವಾಬ್ದಾರಿ ಶಾಲೆಯ ಮುಖ್ಯಸ್ಥರದ್ದಾಗಿದೆ. ಅದರಂತೆ ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಅವರು ಶ್ರೀಯುತ ರುದ್ರಪ್ಪ (ಸಮಾಜ ಸೇವಕರು) ಇವರಿಂದ ಶಿಕ್ಷಕರಿಗೆ POSCO ಕಾಯ್ದೆಯ ವಿವರವಾದ ಮಾಹಿತಿಯನ್ನು ಕೊಡುಸುವುದರ ಮೂಲಕ ಇದರ ಪಾಲನೆಗಾಗಿಯೇ ಶಾಲಾ ವಲಯದಲ್ಲಿ ಒಂದು ಸಂಘವನ್ನು ಕೂಡ ರಚಿಸಲಾಯಿತು.

ಅಲ್ಲದೇ ಮಕ್ಕಳಿಗೆ ಅತಿ ಸೂಕ್ಷ್ಮವಾಗಿ ವಿವರಣಾತ್ಮಕವಾಗಿ ಅವರಿಗೆ ಮನಮುಟ್ಟುವಂತೆ POSCO ಕಾಯ್ದೆಯ ಮಾಹಿತಿ ನೀಡಲು ಚಿತ್ತಾಪೂರ ನಗರದ ಜನಪ್ರೀಯ ಮಹಿಳಾ ವಕೀಲರಾದ ಶ್ರೀಮತಿ ಮಮತಾ ಲಡ್ಡಾ ಅವರನ್ನು ಕರೆದು ಅವರಿಂದ ಮಾಹಿತಿಯನ್ನು ಕೊಡಿಸಲಾಯಿತು.

ಅವರು 18 ವರ್ಷದ ಒಳಗಿನ ಹೆಣ್ಣುಮಕ್ಕಳನ್ನು ಮುಟ್ಟುವುದಾಗಲಿ, ಕೆಟ್ಟ ದೃಷ್ಟಿಯಿಂದ ನೋಡುವುದಾಗಲಿ, ಹಿಂದಿನಿಂದ ಶಿಳ್ಳೆ ಹೊಡೆಯುವುದಾಗಲಿ, ಅಶ್ಲೀಲ ಚಿತ್ರಗಳನ್ನು ತೋರಿಸುವುದಾಗಲಿ, ಚಿತ್ರಿಸಲು ಪ್ರೇರೆಪಿಸುವುದಾಗಲಿ ಹೀಗೆ ಹಲವಾರು ವಿಷಯ ಈ ಕಾಯ್ದೆಯ ಅಡಿಯಲ್ಲಿಯೇ ಬರುತ್ತವೆ. ಈ ಎಲ್ಲ ಅಪರಾಧಗಳಿಗೆ ಅತೀ ಕಠಿಣ ಶಿಕ್ಷೆಗಳನ್ನು ನ್ಯಾಯಾಲಯ ವಿಧಿಸುತ್ತದೆ. ಆದ್ದರಿಂದ ನೀವು ಇಂತಹ ಪ್ರಕರಣಗಳಲ್ಲಿ ತಲೆಹಾಕದೇ ನಿಮ್ಮ ಬಂಗಾರದಂತಹ ವಿದ್ಯಾರ್ಥಿ ಜೀವನವನ್ನು ಅನುಭವಿಸುತ್ತ ಒಳ್ಳೇಯ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತುಂಬಾ ಸೂಕ್ಷ್ಮವಾಗಿ ತಿಳಿಹೇಳಿದರು.

 

 

 

 

ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]