Feb 27: ದಿನಾಂಕ 26.01.2024 ರಂದು ಗದುಗಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು. ಅಂದು ಧ್ವಜಾರೋಹಣ ಕಾರ್ಯಕ್ರಮ, ಪರೆಡ, ನೃತ್ಯ ಸ್ಪರ್ಧೇ ಹಾಗೂ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು. ಲೊಯೊಲಾ ಪ್ರೌಢ ಶಾಲೆಯಿಂದ ಸುಮಾರು 450 ವಿದ್ಯಾರ್ಥಿ- ವಿದ್ಯಾರ್ಥಿನಿಯರು ನೃತ್ಯ ಸ್ಪರ್ಧೇಯಲ್ಲಿ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ್ ರೆನಿಟಾ ಅವರ ಮುಂದಾಳತ್ವದಲ್ಲಿ ನೃತ್ಯವನ್ನು ಮಕ್ಕಳಿಗೆ ನಿರ್ದೇಶಿಸಲಾಗಿತ್ತು. ಈ ನೃತ್ಯದಲ್ಲಿ ಅನೇಕ ಶಿಕ್ಷಕರು ಹಾಗೂ ಶಿಕ್ಷಕಿಯರು ಶ್ರಮವಹಿಸಿದ್ದರು. ಮಕ್ಕಳಿಗೆ ನೃತ್ಯ ಕಲಿಸುವುದರಿಂದ ಅವರ ಉಡುಪು ವಿನ್ಯಾಸ ಎಲ್ಲವನ್ನು ಶಿಕ್ಷಕ/ಕಿಯರು ಸಂಯೋಜಿಸಿದ್ದರು. ಸಂವಿಧಾನದ ರಚನೆಯ ಅಂಗವಾಗಿ ನೃತ್ಯವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ಆಕರ್ಷಿತ ನೃತ್ಯವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿ, ಸಾಮೂಹಿಕ ನೃತ್ಯದಲ್ಲಿ ಮೊದಲನೇಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು, ಉಪನಿದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಶ್ರೀಮತಿ ಪುಷ್ಪಾ ಕಂಬಳಿ
ಲೊಯೊಲಾ ಪ್ರೌಢ ಶಾಲೆ, ಗದಗ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]