May 25: ಪುತ್ತೂರು ತಾಲೂಕಿನಲ್ಲಿ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳಾದ ಬೆಥನಿ ಪ್ರೌಢಶಾಲೆ, ಬೆಥನಿ ಹಿರಿಯ ಪ್ರಾಥಮಿಕ ಶಾಲೆ ಪಾಂಗ್ಲಾಯ್ ಮತ್ತು ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರವು ದಿನಾಂಕ 24/05/2024 ನೇ ಶುಕ್ರವಾರ ದಂದು ಬೆಥನಿ ಶಾಲೆಯ ಸಭಾಂಗಣದಲ್ಲಿ ನಡೆಯುತು. ಬೆಥನಿ ಶಾಲಾ ಸಂಚಾಲಕರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾದ ವಂದನೀಯ ಭಗಿನಿ ಅನ್ನಾ ಮರಿಯ ಕಾರ್ಯದರ್ಶಿಗಳು, ಜೀವಂಧಾರ ಸಮಾಜ ಸೇವಾ ಸಂಘ ಕುಲಶೇಖರ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವೆನಿಶಾ ಬಿ ಎಸ್, ಬೆಥನಿ ಹಿರಿಯ ಪ್ರಾಥಮಿಕ ಶಾಲೆ ಪಾಂಗ್ಲಾಯ್‍ನ ಮುಖ್ಯೋಪಾಧ್ಯಾಯಿನಿ ಭಗಿನಿ ಸೆಲಿನ್ ಪೇತ್ರ ಬಿ ಎಸ್ ಹಾಗೂ ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಆಗ್ನೇಸ್ ಶಾಂತಿ ಬಿ ಎಸ್ ಉಪಸ್ಥಿತರಿದ್ದರು.

ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ವಂದನೀಯ ಭಗಿನಿ ಅನ್ನಾ ಮರಿಯ ಕಾರ್ಯದರ್ಶಿಗಳು, ಜೀವಂಧಾರ ಸಮಾಜ ಸೇವಾ ಸಂಘ ಕುಲಶೇಖರ ರವರು ಬೆಥನಿ ಸಂಸ್ಥೆಯ ಕೇಂದ್ರೀಯ ಮೌಲ್ಯಗಳು ಮತ್ತು ಬೆಥನಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಪ್ರಮುಖ ಆದ್ಯತೆಗಳನ್ನು ಶಾಲಾ ಪಠ್ಯ ವಿಷಯದಲ್ಲಿ ಉಲ್ಲೇಖಿಸಿ, ಮಕ್ಕಳಲ್ಲಿ ಮೌಲ್ಯವನ್ನು ಜಾಗೃತ ಗೊಳಿಸುವ ವಿಧಾನ ಮತ್ತು ಶಾಲೆಯಲ್ಲಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು. ಮಧ್ಯಾಹ್ನದ ನಂತರದ ಅವಧಿಯಲ್ಲಿ ಗುಂಪು ಚರ್ಚೆ, ವಿಯ ಮಂಡನೆ ನಡೆಯಿತು. ಇದು ತಂಡಗಳ ಪ್ರತಿನಿಧಿಗಳಾಗಿ ಶಿಕ್ಷಕರಾದ ಶ್ರೀಯುತ ಬಾಲಕೃಷ್ಣ ರೈ ಪೆÇರ್ದಾಲ್, ಶಿಕ್ಷಕಿಯರಾದ ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಅನಿತಾ ರೋಡ್ರಿಗಸ್, ಶ್ರೀಮತಿ ಶ್ವೇತಾ, ಶ್ರೀಮತಿ ವೀಣಾ ಮಸ್ಕರೆನ್ಹಸ್, ಶ್ರೀಮತಿ ಜೇನಿಫರ್ ಮೋರಾಸ್ ಹಾಗೂ ಶ್ರೀಮತಿ ಸೌಮ್ಯ ವಿಷಯ ಮಂಡಿಸಿದರು. ಶಿಕ್ಷಕಿಯರಾದ ಶ್ರೀಮತಿ ಕ್ಲೇರಾ ಪಾಯಸ್ ಹಾಗೂ ಶ್ರೀಮತಿ ಮೈತ್ರಿ ಅನಿಸಿಕೆ ವ್ಯಕ್ತಪಡಿಸಿದರು. ಭಗಿನಿ ಫೆಲ್ಸಿ ವೇಗಸ್ ಪ್ರಾರ್ಥಿಸಿ, ಬೆಥನಿ ಹಿರಿಯ ಪ್ರಾಥಮಿಕ ಶಾಲೆ ಪಾಂಗ್ಲಾಯ್‍ನ ಶಿಕ್ಷಕಿ ಶ್ರೀಮತಿ ಅನಿತಾ ರೋಡ್ರಿಗಸ್ ಸ್ವಾಗತಿಸಿ, ಬೆಥನಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಬೃಂದಾ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕರಾದ ಬಾಲಕೃಷ್ಣ ರೈ ಪೆÇರ್ದಾಲ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

 

 

ಭಗಿನಿ ವೆನಿಶಾ ಬಿ ಎಸ್, ಮುಖ್ಯೋಪಾಧ್ಯಾಯಿನಿ
ಬೆಥನಿ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ  

 

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]