Jan 03: ನಮ್ಮ ಸಂಸ್ಕøತಿಯಲ್ಲಿ ಹಬ್ಬಗಳಿಗೆ ಮಹತ್ವ ಆಪಾರ, ಜನ ಎಂತಹ ಸ್ಥಿತಿಯಲ್ಲಿದ್ದರೂ ಸಂತಸದಿಂದ ಹಬ್ಬದ ಸಂಭ್ರಮದಲ್ಲಿ ಪಾಲ್ಗೋಳ್ಳುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಆತೀ ಮುಖ್ಯವಾದ ದಿನವೆಂದರೆ ಕ್ರಿಸ್ತ ಜಯಂತಿಯ ದಿನ ಪ್ರಭು ಯೇಸು ಕ್ರಿಸ್ತರ ಸುವಾರ್ತೆಯನ್ನು ಆನಾವರಣಗೊಳಿಸುವುದೇ ಈ ಕ್ರಿಸ್ತ ಜಯಂತಿಯ ಪ್ರಧಾನ ಆಶಯ. ಭಗವಂತನ ಅಗಾಧ ಪ್ರೀತಿಯನ್ನು ಕೃತಜ್ಞತೆಯಿಂದ ಸ್ಮರಿಸುವ ಈ ಸಂಭ್ರಮದ ದಿನ. ಪ್ರಿಯ ಪ್ರಭುವಿನ ಜೊತೆ ನಮ್ಮ ಪ್ರೀತಿಯನ್ನು ಮನಃದಾಳದಿಂದ ಹಂಚಿಕೊಳ್ಳುತ್ತಾ ನಮ್ಮ ಹೃದಯಗಳಲ್ಲಿ ಮನಗಳಲ್ಲಿ ಅವರನ್ನು ಬರಮಾಡಿಕೊಳ್ಳುವ ಸಂತಸ.

ಈ ದಿನ ಸಂತಜೋಸೆಫರ ಪ್ರೌಢಶಾಲೆಯಲ್ಲಿ ಪ್ರಭು ಯೇಸುವಿನ ಜನುಮ ದಿನವನ್ನು ಆತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು, ಜೊತೆ ಜೊತೆಗೆ ಕೆಂಪು ದಿನ - ಭಾಷದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಫಾದರ್ ಡೆನಿಯಲ್ ಪ್ರಕಾಶ್, ಶಾಂತಿಧಾಮದ ನಿರ್ದೇಶಕರು ಮುಖ್ಯ ಆತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು, ಜೊತೆಯಲ್ಲಿ ನಮ್ಮ ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿರವರಾದ ಭಗಿನಿ ಬೆಟ್ಟಿ ಡಿ ಕೋಸ್ಟ ರವರು, ಅವರೊಂದಿಗೆ ಕೈ ಜೋಡಿಸಿದರು. ಉದ್ಘಾಟನೆಯನ್ನು ಮಾಡಿದ ಫಾದರ್ ಡೆನಿಯಲ್ ಪ್ರಕಾಶ್ ರವರು ಮಕ್ಕಳನ್ನು ಕುರಿತು ಕೆಲವು ಕ್ರಿಸ್ಮಸ್ ಸಂದೇಶಗಳನ್ನು ನೀಡಿದರು. ನಂತರ ಈ ದಿನದ ಸಂಭ್ರಮವನ್ನು ಕೆಂಪು ತಂಡದ ಮಕ್ಕಳು ವಿವಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಮೂಲಕ ಮತ್ತಷ್ಟು ಕಳೆಗಟ್ಟಿಸಿದರು. ನಂತರ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.

ಭಗಿನಿ ಬೆಟ್ಟಿಯವರು, ಸುಜ್ಞಾನಗಳ ಜ್ಯೋತಿ, ಸರ್ವರ ಮನೆ ಮನಗಳಲ್ಲಿ ಬೆಳಗಲಿ ಕ್ರಿಸ್ತ ಜಯಂತಿಯ ಈ ಮಹೋತ್ಸವದ ಸಂತೋಷ ಪಡೆದು ಶಾಂತಿ ಸಮಾದಾನವು ನಮ್ಮದಾಗಲಿ ಎಂಬ ಸಂದೇಶವನ್ನು ನೀಡಿದರು.
ಈ ಸುದಿನದಂದು ಮಧ್ಯಾಹ್ನ 3.00 ಗಂಟೆಗೆ ಕೆ.ಆರ್. ನಗರದ ಉಪ ಕಾರಗೃಹದಲ್ಲಿ ಭಗಿನಿ ಭೆಟ್ಟಿಯವರ ನೇತೃತ್ವದೊಂದಿಗೆ ಆಲ್ಲಿನ ಖೈದಿಗಳೊಂದಿಗೆ ಕ್ರಿಸ್ತ ಜಯಂತಿಯನ್ನು ಆಚರಿಸಿ ಮನರಂಜನಾ ಕಾರ್ಯಕ್ರಮವನ್ನು ನೀಡಿ ಬ್‍ಸಿಹಿ ಹಂಚಲಾಯಿತು.
ಈ ಪವಿತ್ರ ಘಟನೆಯು ನಮ್ಮೆಲ್ಲರ ತನು-ಮನಗಳನ್ನು ಶಾಂತಿ ಸುಗಂದದಿಂದ ಬೆಳಗಲಿ ಮತ್ತೂ ಒಂದು ನೂತನ ಚೇತನವಾಗಲಿ.

 

 

 

 

 

 

 

 

 

 

 

 

 

ಪ್ರಶಾಂತ, ಕನ್ನಡ ಭಾಷಾ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ ಆರ್ ನಗರ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]