July 20: 2018-2019ನೇ ಸಾಲಿನ ವನಮಹೋತ್ಸವ ಕಾರ್ಯಕ್ರಮವು ಜುಲೈ 14ರಂದು ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ನೆರವೇರಿತು. ನಿಸರ್ಗ-ಇಕೋ ಕ್ಲಬ್‍ನ ಸದ್ಯಸರು ಈ ಕಾರ್ಯಕ್ರಮವನ್ನು ಆಯೋಜಿಸಿz್ದÀರು. ವನಮಹೋತ್ಸವದ ಅರ್ಥ, ಆಚರಣೆಯ ಪ್ರಾಮುಖ್ಯತೆಯನ್ನು ಸಾರುವ ಕಿರುನಾಟಕ ಹಾಗೂ ಪರಿಸರದ ಗೀತೆಯನ್ನು ಸಂಘದ ಸದಸ್ಯರು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೊಪಾಧ್ಯಾಯನಿ ವಂದನೀಯ ಭಗಿನಿ ಸಿಂತಿಯಾ ಡಿಕುನ್ಹಾರವರು ಗಿಡಗಳನ್ನು ಸಂಘಕ್ಕೆ ವಿತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಆಲಿಸ್ ಲೋಬೊರವರು ಹಸಿರನ್ನು ಉಳಿಸಿ ಜೀವವೈವಿದ್ಯತೆಯನ್ನು ಕಾಪಾಡಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಸಂಘದ ಕಾರ್ಯದರ್ಶಿ ಕುಮಾರಿ ರಕ್ಷಿತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಗಮಿಸಿದ ಸರ್ವರನ್ನು ವಂದಿಸಿದರು. ಜೀವನ್ ಧಾರ ಸಂಸ್ಥೆಯ ಪದಾಧಿಕಾರಿಗಳೂ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ವಿದ್ಯಾರ್ಥಿಗಳೊಡನೆ ಶಾಲಾಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

 

 

 

 

 

 

Sr Cynthia D Cunha, Headmistress
Sacred Hearts High School, Kulshekar

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]