July 20: ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ ದಿನಾಂಕ 13.07.2018ರಂದು 97ನೇಯ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷ ಸ್ಥಾನವನ್ನು ಮೋಕ್ಷರಾಣಿ ದೇವಾಲಯದ ವಂ. ಗುರುಗಳಾದ ಜಾರ್ಜ ಲೋಬೋರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲಕ ಪೋಷಕರ ಸಂಘದ ಸದಸ್ಯರಾದ ಶ್ರೀ ಶರಣಗೌಡ ಪಾಟೀಲ ಹಾಗೂ ಶೀಮತಿ ಅನ್ನಪೂರ್ಣಾ ಹೊತಿನಮಡಿ, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಶ್ರೀ ಬಸವರಾಜ ಬೊಮ್ಮನಳ್ಳಿ, ಅಮೂಲ ತ್ರಿಮಲ ಇವರುಗಳು ಆಗಮಿಸಿದ್ದರು. ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಮೂಡಬೂಳ ಆಗಮಿಸಿದ್ದರು. ವೇದಿಕೆಯ ಮೇಲೆ ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಕವಿತಾ ಬಿ.ಎಸ್, ಹಾಗೂ ಬೆಥನಿ ಭಗಿನಿಯರಾದ ಭಗಿನಿ ಮರಿಯಾ, ಭಗಿನಿ ಬಿಯಾನಾ, ಭಗಿನಿ ಸ್ಯಾಂಡ್ರಾ, ಭಗಿನಿ ಅಂಥೋನಿ ಮೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಾರ್ಥನಾ ಕೂಟದ ಮೂಲಕ ಆರಂಭಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಶರಣಗೌಡ ಪಾಟೀಲ ಮಾತನಾಡಿ ಬೆಥನಿ ವಿದ್ಯಾ ಸಂಸ್ಥೆಯೂ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ, ಉತ್ತಮ ಮೌಲ್ಯಗಳನ್ನು ವiಕ್ಕಳಲ್ಲಿ ಬೆಳೆಸುತ್ತೀದೆ ಎಂದು ಹೇಳಿದರು. ಶ್ರೀ ಮಲ್ಲಿಕಾರ್ಜುನ ಮೂಡಬೂಳ ಅವರು ಮಾತನಾಡಿ ಬೆಥನಿ ಸಂಸ್ಥೆಯೂ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದ್ದು, ಇಲ್ಲಿ ಸಾವಿರಾರು ಬಡಮಕ್ಕಳು, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾ.ಜಾರ್ಜ ಲೋಬೋರವರು ವಿದ್ಯಾ ಸಂಸ್ಥೆಯ ಕಾರ್ಯ ಸಾಧನೆಗಳನ್ನು ತಿಳಿಸಿ ಆಶೀರ್ವಚನವನ್ನು ನೀಡಿದರು. ಮುಖ್ಯೋಪಾಧ್ಯಾಯಿನಿ ಸಿ.ಕವಿತಾ ಬೆಥನಿ ಸಂಸ್ಥೆಯ ಕೇಂದ್ರೀಯ ಮೌಲ್ಯಗಳನ್ನು ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ಬೆಥನಿ ಸಂಸ್ಥೆಯ ಸ್ಥಾಪನೆ ಕುರಿತು ನಾಟಕವನ್ನು ಪ್ರದರ್ಶಿಸಲಾಯಿತು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

 

 

 

 

 

 

ಸಿ.ಕವಿತಾ ಹಾಗೂ ಸಿಬ್ಬಂದಿ ವರ್ಗ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]