“ಪಾರ್ಥಿಸುವ ಬಾಯಿಗಿಂತ ಸೇವೆ ಮಾಡುವ ಕೈಗಳು ಮೇಲು, ಕಾಯಕವೇ ಕೈಲಾಸ, ಕರ್ತವ್ಯವೇ ದೇಗುಲ ಎಂಬ ಮಾತುಗಳು ಕಾಯಕದ ಮಹತ್ವವನ್ನು ಸಾರುತ್ತದೆ.”

ಈ ಮೇಲಿನ ಮಾತಿಗೆ ಭಾಜನರಾದವರು - ಸಂತ ಅಂಥೋಣಿ ಹಿರಿಯ ಪ್ರಾಥಮಿಕ ಶಾಲೆ ಪೊನ್ನಂಪೇಟೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ನಮ್ಮ ಶಾಲೆಯ ಹಿರಿಯ ಉದ್ಯೋಗಿಯಾದ ಶ್ರೀಮಾನ್ ವಿಜಯ್ ಕುಮಾರ್ ಬಿ. ಎಸ್ ರವರು 31-10-2020 ರಂದು ಸುಮಾರು 29 ವರ್ಷಗಳ ಸೇವೆ ಸಲ್ಲಿಸಿ ತಮ್ಮ ಸೇವೆಯಿಂದ ನಿವೃತ್ತಿ ಹೊಂದುವ ಮೂಲಕ ವಿದ್ಯಾಕ್ಷೇತ್ರದ ತಮ್ಮ ಸೇವೆಗೆ ವಿದಾಯ ಹಾಡಿದರು.
ಇವರು ತಮ್ಮ ಸೃಜನಶೀಲತೆ ಪ್ರಾಮಾಣಿಕತೆ, ಸರಳತೆ ಹೊಂದಾಣಿಕೆ, ದೂರದೃಷ್ಟಿ, ಏಕಾಗ್ರತೆ, ವೃತ್ತಿಪರತೆ ವೃತ್ತಿಶ್ರೇಷ್ಟತೆಗಳಿಂದ ಎಲ್ಲರ ಮನಸೆಳೆದವರು. ಇವರ ಕಾರ್ಯವೈಖರಿ ಪಾದರಸದಷ್ಟೆ ಆಕರ್ಷಕ. ತಮ್ಮ ಸೇವಾವಧಿಯಲ್ಲಿ ಸುಮಾರು ಹತ್ತು ಮುಖ್ಯೋಪಾದ್ಯಾಯಿನಿರವ ಅಧಿಕಾರವಧಿಯಲ್ಲಿ ಕೆಲಸ ಮಾಡಿ ಆಡಳಿತ ವರ್ಗದಿಂದ ಹಿಡಿದು ವಿದ್ಯಾರ್ಥಿ ಪೋಷಕ ವರ್ಗದವರೆಗೆ ಎಲ್ಲರ ಪ್ರೀತಿ, ವಿಶ್ವಾಸ, ಸ್ನೇಹ, ನಂಬಿಕೆಗಳಿಗೆ ಹೆಗ್ಗಳಿಕೆ ಇವರದು.

ತಮ್ಮ ನಿಸ್ವಾರ್ಥ ಸೇವೆಯಿಂದ, ಶ್ರದ್ದೆ ಭಕ್ತಿಯಿಂದ ತನ್ನ ಬದುಕಿನ ಕರ್ತವ್ಯದ ಪಯಣವನ್ನು ಮಧುರವಾಗಿ ಕಳೆದ ಕೀರ್ತಿಗೆ ಇವರು ಭಾಜನರು. ಇವರ ಅಮೋಘವಾದ ಸೇವೆಯನ್ನು ಪರಿಗಣಿಸಿ ನಮ್ಮ ಶಾಲೆಯ ಮುಖ್ಯೋಪಾದ್ಯಾಯಿನಿಯವರಾದ ಸಹೋದರಿ ಟ್ರೆಸ್ಸಿಯವರು ಇವರನ್ನು ಸನ್ಮಾನಿಸಿ ಗೌರವಿಸಿದರೆ, ಇವರ ಶ್ರೀಮತಿ ಎಲಿಜಬೆತ್ ಅವರನ್ನು ಶಾಲೆಯ ಸಂಚಾಲಕಿಯಾದ ಸಹೋದರಿ ಮೆಲ್ವೀನರವರು ಗೌರವಿಸಿದರು. ದಂಪತಿಗಳಿಬ್ಬರಿಗೂ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ, ಸನ್ಮಾನ ಪತ್ರ ಹಾಗೂ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಲ್ಲಾ ಭೋದಕ ಹಾಗೂ ಭೋದಕೇತರ ವರ್ಗ ಹಾಗೂ ಸನ್ಮಾನಿತರ ಕುಟುಂಬದ ಸರ್ವ ಸದಸ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

 

ಸಂತ ಅಂಥೋಣಿ ಹಿರಿಯ ಪ್ರಾಥಮಿಕ ಶಾಲೆ, ಪೊನ್ನಂಪೇಟೆ

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]