“ಕಂಬನಿಯಲ್ಲೂ ಸಂಭ್ರಮವಿರುತ್ತದೆ. ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆಬೇಕು. ಮೌನದಲ್ಲೂ ಮಾತು ಇರುತ್ತದೆ, ಅಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು”ಎಂಬ ಈ ಮಾತುಗಳು ಜ್ಯೋತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾಚರಕನಹಳ್ಳಿ ಬೆಂಗಳೂರು ಇಲ್ಲಿನ ಶಿಕ್ಷಕಿ ಶ್ರೀಮತಿ ಶಾಂತಿ ಕುಮಾರಿಯವರಿಗೆ ಅನ್ವಯಿಸುತ್ತದೆ. ಇವರು ದಿನಾಂಕ 31.10.2020ರಂದು ತಮ್ಮ 39ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದರು.

ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಇವರ ಪಾಠಗಳು ಸುಲಭವಾಗಿ ಮಕ್ಕಳಿಗೆ ಅಥ9ವಾಗುವಂತೆ ಇರುತ್ತಿತ್ತು. ಪ್ರತಿಭಾವಂತ ಶಿಕ್ಷಕಿ ಎಲ್ಲಾ ಕಛೇರಿ –ಕಡತಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು, ಸಹಬಾಳ್ವೆ, ಸಹಕಾರ, ಸದಾಚಾರ, ಸುಕೋಮಲತೆ ಇತ್ಯಾದಿ ಮೌಲ್ಯಗಳಿಂದ ಕೂಡಿದ ಅನನ್ಯ ವ್ಯಕ್ತಿತ್ವ ಇವರದು.

ಬೆಥನಿ ಸಂಸ್ಥೆಯಲ್ಲಿ ಸದಾ ಹಸಮ್ಮುಖಿಯಾಗಿ ತಮ್ಮ ವರ್ಷಗಳ ಅಮ್ಯೂಲ ಸೇವೆ ನೀಡಿ ಮಕ್ಕಳ ಹಾಗೂ ಸಂಸ್ಥೆಯ ಉಜ್ವಲ ಭವಿಷ್ಯಕ್ಕೆ ಕಾರಣಕರ್ತರಾದ ಶ್ರೀಮತಿ ಶಾಂತಿ ಕುಮಾರಿಯವರಿಗೆ ಬೆಥನಿ ವಿದ್ಯಾಸಂಸ್ಥೆಯ ಪರವಾಗಿ ವಿದಾಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ಅಧ್ಯಕ್ಷರಾಗಿ ಬೆಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಭಗಿನಿ ಸಹನಾ ಬಿ.ಎಸ್,ಮುಖ್ಯ ಅತಿಧಿ ಭಗಿನಿ ಜೀವನ್, ಶಾಲಾ ಸಂಚಾಲಕಿ ಭಗಿನಿ ಪ್ರಕಾಶ್, ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಶಾಲೆಟ್ ಮತ್ತು ಎಲ್ಲಾ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿಭಾಗವಹಿಸಿ ಶ್ರೀಮತಿ ಶಾಂತಿಯವರಿಗೆ ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ, ಸನ್ಮಾನ ಪತ್ರ ನೀಡಿ ಗೌರವಿಸಿ ಸನ್ಮಾನಿಸಿದರು.


 

 

ಭಗಿನಿ ಶಾಲೆಟ್, ಮುಖ್ಯೋಪಾದ್ಯಾಯಿನಿ
ಜ್ಯೋತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾಚರಕನಹಳ್ಳಿ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]