ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಶ್ರೀಮತಿ ಐರಿನ್ ಲೋಬೋ ಇವರು ಸತತವಾಗಿ 36 ವರ್ಷಗಳ ಸುದೀರ್ಘ ವೃತ್ತಿ ಜೀವನವನ್ನು ತೃಪ್ತಿಯಿಂದ ಪೂರೈಸಿ ನಿವೃತ್ತಿಯಾಗುವ ಸಂದರ್ಭದಲ್ಲಿ ದಿನಾಂಕ 02.10.2021 ರಂದು ಶಾಲಾ ಆಡಳಿತ ಮಂಡಳಿಯ ಪರವಾಗಿ ಸನ್ಮಾನ ಸಂಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಂಗಳೂರು ಪ್ರಾಂತೀಯ ಮುಖ್ಯಸ್ಥೆಯ ಸಲಹೆಗಾರರು ಹಾಗೂ ಶಿಕ್ಷಣ ಸಂಯೋಜಕರಾದ ಸಿಸ್ಟರ್ ಶುಭ ಇವರು ಅಲಂಕರಿಸಿದರು ಮುಖ್ಯ ಅತಿಥಿಗಳಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಂಚಾಲಕಿಯವರಾದ ವಂದನೀಯ ಭಗಿನಿ ಮಾರಿಬೆಲ್ ಮತ್ತು ಬದ್ರಿಯಾ ಕ್ಲಸ್ಟರಿನ ಸಿ.ಆರ್.ಪಿ ಯವರಾದ ಶ್ರೀಮತಿ ಶೀಲಾವತಿಯವರು ಆಗಮಿಸಿದ್ದರು. ಪ್ರಾರ್ಥನಾ ವಿಧಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕಿಯನ್ನು ಆಡಳಿತ ಮಂಡಳಿ, ಶಾಲಾ ರಕ್ಷಕ-ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು. ನಿವೃತ್ತ ಶಿಕ್ಷಕಿಯರು ವೃತ್ತಿ ಜೀವನದ ಮೆಲುಕುಗಳನ್ನು ಹಂಚಿಕೊಂಡರು. ಅಧ್ಯಕ್ಷಕರು ನಿವೃತ್ತ ಶಿಕ್ಷಕರು ಗುಣಗಾನ ಮಾಡಿ ಮುಂದಿನ ಬದುಕಿಗೆ ಶುಭಕೋರಿದರು.

ಶಾಲಾ ನಿವೃತ್ತಿ ಶಿಕ್ಷಕರೊಂದಿಗೆ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಶರು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

ಸಿಸ್ಟರ್ ಲಿಲ್ಲಿ ಡಿಸೋಜ, ಮುಖ್ಯೋಪಾಧ್ಯಾಯಿನಿ
ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ, ಕಿನ್ನಿಕಂಬಳ

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]