ದಿನಾಂಕ 11.10.2021 ರಂದು ಪೂರ್ವಾಹ್ನ 11.30 ಗಂಟೆಗೆ ಸರಿಯಾಗಿ ಸ್ವ ಇಚ್ಚಾ ನಿವøತ್ತಿ ಪಡೆದಿರುವ ಭಗಿನಿ ರೋಶಲ್‍ರವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂ| ಭ| ಸಿಸಿಲಿಯಾ ಮೆಂಡೊನ್ಸಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರು ಸಿ| ಲಿಝಿ, ಹಾಗೂ ಸ್ಥಳೀಯ ನಜರೆತ್ ಕನ್ಯಾಮಠದ ಮುಖ್ಯಸ್ಥೆ ಭ| ಸಿಂತಿಯಾ ಡಿಕುನ್ಹಾರವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಭ| ವೆನಿಶಾರವರು ಸರ್ವರನ್ನು ಸ್ವಾಗತಿಸಿದರು.

ಹಳೆ ವಿದ್ಯಾರ್ಥಿನಿ ಕು. ವಿಲ್ಮಾರವರು ಹಾಗೂ ಸಹಶಿಕ್ಷಕಿ ಶ್ರೀಮತಿ ಅನಿತಾ ಸಲ್ಡಾನರವರು ನಿವøತ್ತ ಶಿಕ್ಷಕರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ಸಂಚಾಲಕಿ ಭ| ಲಿಝಿಯವರು ಸನ್ಮಾನ ಪತ್ರವನ್ನು ಓದಿದರು. ಶಿಕ್ಷಕರು ಶುಭಾಶಯ ಗೀತೆ ಹಾಡಿದರು.

ಸಹಶಿಕ್ಷಕಿ ಶ್ರೀಮತಿ ಡೆಲ್ಸಿಯವರು ಬೆಥನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಭ| ಮಾರಿಯೆಟ್‍ರವರು ಕಳುಹಿಸಿದ ಸಂದೇಶವನ್ನು ಓದಿದರು. ವೇದಿಕೆಯಲ್ಲಿರುವ ಅಧ್ಯಕ್ಷರು ಅತಿಥಿಗಣ್ಯರು ಸನ್ಮಾನಿತರಿಗೆ ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು. ಮುಖ್ಯ ಶಿಕ್ಷಕಿ ಸಿ| ವೆನಿಶಾರವರು ಶಾಲಾ ಪರವಾಗಿ ಕಿರು ಕಾಣಿಕೆ ನೀಡಿದರು.

ಸನ್ಮಾನಿತ ಶಿಕ್ಷಕಿ ಭಗಿನಿ ರೋಶಲ್‍ರವರು ತಮ್ಮ ಅನುಭವದ ಮಾತುಗಳನ್ನಾಡಿ ಕøತಜ್ಞತೆ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷರು ವಂ| ಭ| ಸಿಸಿಲಿಯಾ ಮೆಂಡೊನ್ಸಾರವರು ಅಧ್ಯಕ್ಷೀಯ ಭಾಷಣ ಗೈದು ಶುಭಾಶಯ ಸಲ್ಲಿಸಿದರು. ಸ್ಥಳೀಯ 3 ಸಂಸ್ಥೆಗಳ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಗ್ರೆಟ್ಟಾರವರು ಸರ್ವರನ್ನು ವಂದಿಸಿದರು. ಸಹಶಿಕ್ಷಕಿ ಭ| ಪ್ರೆಫಿಲ್ಡಾರವರು ಕಾರ್ಯಕ್ರಮ ನಿರೂಪಿಸಿದರು.

 

 

 

 

ಪ್ರೆಫಿಲ್ಡಾ, ಸಹಶಿಕ್ಷಕಿ
ಲ್ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಬಜ್ಪೆ

 

 

 

 

 

 

 

 

 

 

Comments powered by CComment

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]