ಮೆಡಲಿನ್ ಪ್ರೌಢಶಾಲೆಯಲ್ಲಿ ಸುದೀರ್ಘ 38 ವರ್ಷಗಳ ಸೇವೆ ಸಲ್ಲಿಸಿ, ಸೇವಾ ವೃತ್ತಿಯಿಂದ ನಿವೃತ್ತರಾದ ಶ್ರೀ ಮಧುಕರ್ ಬಿ ನಾಯಕ್ ಇವರ ವಿದಾಯ ಸಮಾರಂಭವು ದಿನಾಂಕ 05.3.2022 ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.

ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳು ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಸಿಕೊಂಡರು. ಪ್ರಾರ್ಥನಾವಿಧಿ ಮತ್ತು ಸ್ವಾಗತ ನೃತ್ಯದ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಭೆಥನಿ ಮಂಗಳೂರು ಪ್ರಾಂತ್ಯೀಯ ಶಿಕ್ಷಣ ಸಂಯೋಜಕಿಯಾದ ವಂ.ಭ ಶುಭರವರು ಅಲಂಕರಿಸಿದ್ದರು, ಶಾಲಾ ಸಂಚಾಲಕಿ ವಂ.ಭ ಮಾರಿಲಿಟಾ ಬಿ.ಎಸ್ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು ಸನ್ಮಾನಿತರ ಕುಟುಂಬದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯಸ್ಥೆ ವಂ.ಭ ಮರಿಸ್ಸಾ ಲೂಸಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಬಳಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರು ತಮ್ಮ 38 ವರುಷಗಳ ಸೇವಾವಧಿಯ ಸವಿ ನೆನಪುಗಳನ್ನು ಮೆಲುಕು ಹಾಕಿ ಎಲ್ಲರನ್ನೂ ವಂದಿಸಿದರು. ಅಧ್ಯಕ್ಷರು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿತರಿಗೆ ಶುಭ ಹಾರೈಸಿದರು. ಮೆಡಲಿನ್ ಹಿ ಪ್ರಾ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಜೂಡಿತ್ ಡಿ.ಸೋಜರವರು ಸರ್ವರನ್ನು ವಂದಿಸಿದರು, ಸಹಶಿಕ್ಷಕಿ ಶ್ರೀಮತಿ ಜ್ಯೋತಿ ಸಿಂತಿಯಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

ಸಿಸ್ಟರ್ ಮರಿಸ್ಸಾ ಲೂಸಿ, ಮುಖ್ಯೋಪಾಧ್ಯಾಯಿನಿ
ಮೆಡಲಿನ್ ಪ್ರೌಢಶಾಲೆ, ಮುಲ್ಕಿ

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]