Jan 05: ಇಡೀ ಜಗತ್ತಿಗೆ ಸುಖ, ಶಾಂತಿ, ಸಹನೆ, ಸಂತೋಷ, ಸೌಹಾರ್ದತೆ ಮುಂತಾದವುಗಳನ್ನು ಪಸರಿಸುವ ಹಬ್ಬವೇ ಈ ನಮ್ಮ ಯೇಸುವಿನ ಜನನದ ದಿನವಾದ ಕ್ರಿಸ್ಮಸ್ ಹಬ್ಬ.

ದಿನಾಂಕ 23.12.2023ರ ಶನಿವಾರದಂದು ನಮ್ಮ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳು ಒಟ್ಟುಗೂಡಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದೆವು.

ಕಾರ್ಯಕ್ರಮವು ಪ್ರಾರ್ಥನೆ, ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಗಿ ಮುಂದುವರೆದು ಯೇಸುವಿನ ಜನನ ದಿನಗಳಿಗೂ ಇತ್ತಿಚಿನ ದಿನಗಳಿಗೂ ಹೋಲಿಸಿ ಎಲ್ಲರಲ್ಲಿರುವ ಕೆಟ್ಟತನ ದೂರವಾಗಿ ಒಳ್ಳೆಯತನ ಮೈಗೂಡಲಿ ಎಂಬ ಸಂದೇಶದ ನಾಟಕಗಳನ್ನು ಪ್ರದರ್ಶಿಸಲಾಯಿತು.

ತದನಂತರ ಫಾದರ ಫೆಡ್ರಿಕ್ ಡಿಸೋಜಾರವರು ಧರ್ಮದ ಮೂಲ ಉದ್ಧೇಶವೆ ಶಾಂತಿ ಸ್ಥಾಪನೆ ಎನ್ನುವಂತಹ ಹಿತನುಡಿಗಳನ್ನು ಹೇಳಿದರು. ಅಲ್ಲದೆ ಹಲವಾರು ಯೇಸುವಿನ ಸಂದೇಶಗಳನ್ನು ಸಾರುವ ನೃತ್ಯಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಕೊನೆಯದಾಗಿ ಶ್ರೀಯುತ ದೇವಪ್ಪ ಸರ ಅವರ ವಂದನಾರ್ಪಣೆಯೊಂದಿಗೆ ಮಕ್ಕಳೆಲ್ಲರಿಗೂ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

 

 

 

 

 

 

 

 

 

ಶ್ರೀಮತಿ ಅರ್ಚನಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]